ಹೊಸದಿಗಂತ ವರದಿ ಯಲ್ಲಾಪುರ:
ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಮಾಗೋಡ್ ಕ್ರಾಸ್ ಬಳಿ ಹೋಟೆಲ್ ಮೇಲೆ ಮರವೊಂದು ಮುರಿದು ಬಿದ್ದ ಪರಿಣಾಮ ಹತ್ತಿರವಿದ್ದ ವಿದ್ಯುತ್ ಕಂಬಕ್ಕೂ ಹಾನಿಯಾಗಿದೆ. ವಿದ್ಯುತ್ ಕಂಬದ ತಂತಿಗಳು ಜೋತಾಡುತ್ತಿದ್ದು, ಅದೃಷ್ಟವಶಾತ್ ಯಾವದೇ ಪ್ರಾಣ ಹಾನಿಯಾಗಿಲ್ಲ.
ಹೋಟೆಲ್‌ನಲ್ಲಿದ್ದ 4,5 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ, ಗುರುವಾರ ಅರಣ್ಯ, ಹೆಸ್ಕಾಂ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಮರ ತೆರವು ಗೊಳಿಸಲುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಅಂದಾಜು 5ಲಕ್ಷ ರೂ ಹಾನಿಯಾಗಿದ್ದುಇ ದೀಗ ವೃತ್ತಿಯನ್ನು ನಂಬಿಕೊಂಡು ಜೀವನ್ ನಿರ್ವಹಣೆ ಮಾಡುತ್ತಿದ್ದ ನಮಗೆ ದಿಕ್ಕು ತೋಚದಂತಾಗಿದೆ ಎಂದು ಹೋಟೆಲ್ ನ್ಯಾಷನಲ್ ಮಾಲಕ ಬಶೀರ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸಂಬಂಧ ಪಟ್ಟ ಇಲಾಖೆಯವರು ಮಳೆಗಾಲ ಪೂರ್ವದಲ್ಲಿಯೇ ಬೀಳುವಂತಾಗಿರುವ ಮರಗಳನ್ನು ಕಡಿಯದೆ ಹಾಗೆ ಬಿಟ್ಟಿರುವುದು ಇಂದಿನ ಅವಘಡ ಕಾರಣವಾಗಿದೆ ಎಂಬ ಮಾತು ಸಾರ್ವಜನಿಕರಿಂದ ಕೇಳಿಬಂತು.