July 31, 2026
Friday, July 31, 2026
spot_img

GREEN | ಮನೆಯ ಅಂದ, ಆರೋಗ್ಯ ಹೆಚ್ಚಿಸೋಕೆ ಮುಂದೆ ಮರಗಳು ಇರಲೇಬೇಕು

ನಿಮ್ಮ ಡ್ರೀಮ್‌ ಹೌಸ್‌ ಹೇಗಿರಬಹುದು ಎಂದು ಇಮ್ಯಾಜಿನ್‌ ಮಾಡಿಕೊಳ್ಳಿ. ಕಾಂಪೌಂಡ್‌ ಹಾಕದೇ ಇರುವಷ್ಟು ದೊಡ್ಡ ಮನೆ, ಸುತ್ತ ಲಾನ್‌, ಮನೆಯ ಹಿಂಬದಿ ಹಾಗೂ ಮುಂದೆ ದೊಡ್ಡ ಮರಗಳು. ಅಲ್ವಾ?

ಮನೆಯಾಗಲಿ, ರಸ್ತೆಯಾಗಲಿ ಊರಾಗಲೀ ಚಂದ ಕಾಣೋದು ಹಸಿರಿನಿಂದ. ಬಯಲು ಸೀಮೆಯ ಜನ ಮಲೆನಾಡಿಗೆ ಬಂದರೆ ಖುಷಿ ಪಡೋಕೆ ಯಾಕೆ? ಚಂದದ ಮರ ಗಿಡಗಳನ್ನು ನೋಡಿ ಅಲ್ವಾ?

ಮನೆಯ ಮುಂದೆ ಮರ ಹಾಕೋದನ್ನು ಮಿಸ್‌ ಮಾಡಬೇಡಿ. ಯಾಕೆ ಗೊತ್ತಾ?

ಮನೆಯ ಮುಂದೆ ಮರ ಹಾಕಿದ್ರೆ ತಂಗಾಳಿ ಬರುತ್ತದೆ. ನಿಮ್ಮ ಮನೆಯೂ ಇದರಿಂದ ತಣ್ಣಗಿರುತ್ತದೆ. ಫ್ಯಾನ್‌, ಎಸಿ ಖರ್ಚು ಉಳಿಯುತ್ತದೆ.

ನೀವು ಉಸಿರಾಡುವ ಗಾಳಿ ಮಲಿನವಾಗಿದ್ದರೆ ಮನೆಯ ಮುಂದೆ ಮರ ಇರಲಿ, ಆಗ ಅದು ಏರ್‌ ಕ್ವಾಲಿಟಿ ಹೆಚ್ಚಾಗುವಂತೆ ಮಾಡುತ್ತದೆ.

ರಸ್ತೆಯ ಗಾಡಿಗಳ ಸದ್ದು ಹಾಗೂ ಧೂಳನ್ನು ಮರ ತಡೆಗಟ್ಟುತ್ತದೆ. ಇದರಿಂದ ನೀವು ಮನೆಯೊಳಗೆ ನೆಮ್ಮದಿಯಾಗಿ ಇರಬಹುದು.

ಮನೆಯ ಅಂದ ಹೆಚ್ಚುತ್ತದೆ. ಒಂದೇ ಒಂದು ಮರ ನಿಮ್ಮ ಮನೆಯನ್ನು ಏಸ್ತಟಿಕ್‌ ಆಗಿ ಕಾಣುವಂತೆ ಮಾಡುತ್ತದೆ.

ಮನೆಯ ಮುಂದೆ ಮರ ಇರುವ ಜನರಿಗೆ ಒತ್ತಡ ಕಡಿಮೆಯಂತೆ, ಬಿಪಿ ಹಾಗೂ ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದಂತೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !