ರಾಧಾಕೃಷೃ ಅಶ್ಲೀಲ ಪೇಂಟಿಂಗ್‌ ಮಾರಾಟ: ಟ್ರೆಂಡ್‌ ಆಗ್ತಿದೆ ʼಬಾಯ್ಕಾಟ್‌ ಅಮೇಜಾನ್‌ʼ ಹ್ಯಾಶ್‌ ಟ್ಯಾಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹಿಂದು ದೇವತೆಗಳಾದ ರಾಧಾ ಮತ್ತು ಕೃಷ್ಣರ ‘ಅಶ್ಲೀಲ’ ಪೇಂಟಿಂಗ್‌ಗಳನ್ನು ಇ-ಕಾಮರ್ಸ್‌ ದೈತ್ಯ ಅಮೇಜಾನ್‌ ಮಾರಾಟ ಮಾಡುತ್ತಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಆರೋಪಿಸಿದೆ.

ಈ ಆರೋಪದ ನಂತರ ಟ್ವಿಟರ್ ಬಳಕೆದಾರರು #Boycott_Amazon ಎಂಬ ಹ್ಯಾಶ್‌ಟ್ಯಾಗ್ ಅನ್ನು ಟ್ರೆಂಡ್ ಮಾಡಲು ಪ್ರಾರಂಭಿಸಿದ್ದಾರೆ.

ಅಮೆಜಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದೂ ಸಂಘಟನೆಯ ಸದಸ್ಯರು ಬೆಂಗಳೂರಿನ ಸುಬ್ರಹ್ಮಣ್ಯ ನಗರ ಠಾಣೆಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಇನ್ನೊಂದು ವೆಬ್‌ ಸೈಟ್‌ ಎಕ್ಸೋಟಿಕ್ ಇಂಡಿಯಾ ಕೂಡ ಜನ್ಮಾಷ್ಟಮಿ ಮಾರಾಟದ ಅಡಿಯಲ್ಲಿ ಇದೇ ರೀತಿಯ ಪೇಂಟಿಂಗ್‌ ಗಳನ್ನು ಮಾರಾಟ ಮಾಡಿದೆ ಎಂದು ಆರೋಪಿಸಲಾಗಿದೆ. ಟ್ವೀಟರ್‌ ನಲ್ಲಿ ಹ್ಯಾಶ್‌ ಟ್ಯಾಗ್‌ ಟ್ರೆಂಡ್‌ ಆಗುತ್ತಿದ್ದಂತೆ ಅಮೆಜಾನ್ ಮತ್ತು ಎಕ್ಸೋಟಿಕ್ ಇಂಡಿಯಾ ಎರಡೂ ತಮ್ಮ ವೆಬ್‌ಸೈಟ್‌ಗಳಿಂದ ಪೇಂಟಿಂಗ್ ಅನ್ನು ತೆಗೆದುಹಾಕಿವೆ.

“ಇದು ಸಾಕಾಗುವುದಿಲ್ಲ. ಅಮೆಜಾನ್ ಮತ್ತು ಎಕ್ಸೋಟಿಕ್ ಇಂಡಿಯಾ ಎರಡೂ ಬೇಷರತ್ ಕ್ಷಮೆಯಾಚಿಸಬೇಕು ಮತ್ತು ಹಿಂದೂಗಳ ಭಾವನೆಗಳನ್ನು ಎಂದಿಗೂ ನೋಯಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು” ಎಂದು ಹಿಂದೂ ಬೆಂಬಲಿಗರು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!