TRENDING | ನೆಲಕ್ಕೆ ಬಿದ್ದ ಪಾಟೀಲರ ಕರವಸ್ತ್ರವನ್ನು ಖುದ್ದು ಪ್ರಧಾನಿ ಮೋದಿಯೇ ಹೆಕ್ಕಿಕೊಟ್ಟರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಪ್ರಧಾನಿ ನರೇಂದ್ರ ಮೋದಿ ವಯೋವೃದ್ಧರ ಕುರಿತಾಗಿ, ಬಡವರ ಕುರಿತಾಗಿ ಅವರು ತೋರಿಸುವ ಸಹಾನುಭೂತಿಯ ಸಾಕಷ್ಟು ಚಿತ್ರಗಳನ್ನು ನಾವು ಕಂಡಿದ್ದೇವೆ. ಹಾಗೆಯೇ ಸೋಮವಾರವೂ ಒಂದು ಮನಸೆಳೆಯುವ ವಿಡಿಯೋ ವೈರಲ್ ಆಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಅವರ ಕರವಸ್ತ್ರ ನೆಲಕ್ಕೆ ಬಿದ್ದಿತ್ತು. ಇದನ್ನು ನರೇಂದ್ರ ಮೋದಿ ಎತ್ತಿಕೊಟ್ಟಿರುವ ವಿಡಿಯೋ ವೈರಲ್ ಆಗಿದೆ.

 

ಹೌದು, ಅನಾರೋಗ್ಯದ ಕಾರಣ, ಪ್ರತಿಭಾ ಪಾಟೀಲ್‌ ಅವರಿಗೆ ಕರವಸ್ತ್ರವನ್ನು ಎತ್ತಿಕೊಳ್ಳಲು ಸಾಧ್ಯವಾಗಲಿಲ್ಲ. ಈ ವೇಳೆ ಪ್ರಧಾನಿ ಮೋದಿ ಅವರು ಸಹಾಯಕ್ಕೆ ಬಂದರು.

ಅಲ್ಲದೇ ಅವರ ಪಕ್ಕ ಕುಳಿತು ಕುಶಲೋಪರಿ ಮಾತುಕತೆಯನ್ನು ನಡೆಸಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಜನತೆಯಲ್ಲಿ ಪ್ರಧಾನಿ ಕುರಿತು ಮತ್ತಷ್ಟು ಗೌರವ ಹೆಚ್ಚಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!