ಬ್ರಿಟೀಷರಿಗೆ ಸಿಂಹಸ್ವಪ್ನನಾಗಿದ್ದ ಈ ಬುಡಕಟ್ಟು ವೀರ ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:(ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವಿಶೇಷ)
ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತದ ಅನೇಕ ಬುಡಕಟ್ಟು ಸಮುದಾಯಗಳು ಸಕ್ರಿಯವಾಗಿ ಪಾಲ್ಗೊಂಡಿವೆ. ಅವರು ವಸಾಹತುಶಾಹಿಗಳನ್ನು ವಿರೋಧಿಸಲು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿದ್ದಾರೆ. ಅಂಥಹ ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟಗಾರರಲ್ಲಿ 1775 ರಲ್ಲಿ ವಸಾಹತು ಶಾಹಿಗಳನ್ನು ನಡುಗಿಸಿದ ತಿಲ್ಕಾ ಮಾಂಝಿ ಪ್ರಾತಃಸ್ಮರಣೀಯ.

ತನ್ನ ಜನರನ್ನು ಮತ್ತು ಭೂಮಿಯನ್ನು ರಕ್ಷಿಸಲು ನಿರ್ಧರಿಸಿದ ತಿಲ್ಕಾ ಆದಿವಾಸಿಗಳನ್ನು ಬಿಲ್ಲು ಮತ್ತು ಬಾಣಗಳ ಬಳಕೆಯಲ್ಲಿ ತರಬೇತಿ ಪಡೆದ ಸೈನ್ಯವಾಗಿ ಸಂಘಟಿಸಿದ. ಅವರುವರ್ಷಗಳ ಕಾಲ ಯುರೋಪಿಯನ್ನರು ಮತ್ತು ಅವರ ಸೈನ್ಯದೊಂದಿಗೆ ಯುದ್ಧ ಮಾಡಿದ. 1770ರಲ್ಲಿ ಸಂತಾಲ್ ಪ್ರದೇಶದಲ್ಲಿ ಭೀಕರ ಬರಗಾಲ ಉಂಟಾಯಿತು. ಜನರು ಹಸಿವಿನಿಂದ ಸಾಯುತ್ತಿದ್ದರು. ತಿಲ್ಕಾ ಕಂಪನಿಯ ಖಜಾನೆಯನ್ನು ಲೂಟಿ ಮಾಡಿ ಬಡವರು ಮತ್ತು ನಿರ್ಗತಿಕರಿಗೆ ಹಂಚಿದ.

ತಿಲ್ಕಾನ ಈ ಉದಾತ್ತ ಗುಣದಿಂದ ಪ್ರೇರಿತರಾಗಿ ಇತರ ಅನೇಕ ಬುಡಕಟ್ಟು ಜನಾಂಗದವರು ಸಹ ದಂಗೆಗೆ ಸೇರಿದರು. ಇದರೊಂದಿಗೆ “ಸಂತಾಲ್ ಹೂಲ್” (ಸಂತಾಲರ ದಂಗೆ) ಪ್ರಾರಂಭವಾಯಿತು. ಅವರು ಬ್ರಿಟಿಷರು ಮತ್ತು ಸಿಕೋಫಾಂಟಿಕ್ ಮಿತ್ರರ ಮೇಲೆ ದಾಳಿ ಮಾಡುವುದನ್ನು ಮುಂದುವರೆಸಿದರು. 1771 ರಿಂದ 1784 ರವರೆಗೆ ತಿಲ್ಕಾ ಶರಣಾಗಲೇ ಇಲ್ಲ.

1784 ವರ್ಷವನ್ನು ಬ್ರಿಟಿಷರ ವಿರುದ್ಧದ ಮೊದಲ ಸಶಸ್ತ್ರ ದಂಗೆ ಎಂದು ಪರಿಗಣಿಸಲಾಗಿದೆ. ತಿಲ್ಕಾ ಮಾಂಝಿ ಈಸ್ಟ್ ಇಂಡಿಯಾ ಕಂಪನಿಯ ಆಡಳಿತಗಾರ ಆಗಸ್ಟಸ್ ಕ್ಲೀವ್ಲ್ಯಾಂಡ್ ಮೇಲೆ ದಾಳಿ ಮಾಡಿ ಮಾರಣಾಂತಿಕವಾಗಿ ಗಾಯಗೊಳಿಸಿದ. ಬ್ರಿಟಿಷರು ಅವನು ಕಾರ್ಯನಿರ್ವಹಿಸುತ್ತಿದ್ದ ತಿಲಾಪುರ ಅರಣ್ಯವನ್ನು ಸುತ್ತುವರೆದರು ಆದರೆ ತಿಲ್ಕಾ ತನ್ನ ಸಂಗಡಿಗರೊಂದಿಗೆ ಹಲವಾರು ವಾರಗಳ ಕಾಲ ಬ್ರೀಟೀಷರ ಸೈನ್ಯವನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ.
ಅಂತಿಮವಾಗಿ 1784 ರಲ್ಲಿ ಸಿಕ್ಕಿಬಿದ್ದಾಗ, ಆತನನ್ನು ಕುದುರೆಯ ಬಾಲಕ್ಕೆ ಕಟ್ಟಲಾಯಿತು ಮತ್ತು  ಬಿಹಾರದ ಭಾಗಲ್ಪುರದಲ್ಲಿರುವ ಕಲೆಕ್ಟರ್ ನಿವಾಸಕ್ಕೆ ಎಳೆದೊಯ್ಯಲಾಯಿತು. ಅಲ್ಲಿ ಅವನ ಛಿದ್ರಗೊಂಡ ದೇಹವನ್ನು ಆಲದ ಮರಕ್ಕೆ ನೇತು ಹಾಕಲಾಯಿತು.

ಭಾರತದ ಸ್ವಾತಂತ್ರ್ಯದ ನಂತರ ತಿಲ್ಕಾನನ್ನು ಗಲ್ಲಿಗೇರಿಸಿದ ಸ್ಥಳದಲ್ಲಿ ಅವನ  ಪ್ರತಿಮೆಯನ್ನು ಸ್ಥಾಪಿಸಲಾಯಿತು, ಅಲ್ಲದೆ, ಭಾಗಲ್ಪುರ್ ವಿಶ್ವವಿದ್ಯಾನಿಲಯವನ್ನು ತಿಲ್ಕಾ ಮಾಂಝಿ ಭಾಗಲ್ಪುರ್ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಯಿತು. ಆತನ ಮತ್ತೊಂದು ಪ್ರತಿಮೆಯನ್ನು ಜಾರ್ಖಂಡ್‌ನ ದುಮ್ಕಾದಲ್ಲಿ ಸ್ಥಾಪಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!