Sunday, December 4, 2022

Latest Posts

‘ತೆಲುಗು ಚಿತ್ರರಂಗಕ್ಕೆ ಹೆಮ್ಮೆ ತಂದ ವ್ಯಕ್ತಿತ್ವಕ್ಕೆ ಶ್ರದ್ಧಾಂಜಲಿ’: ನಟ ಕೃಷ್ಣ ಅವರ ನಿಧನಕ್ಕೆ ಚಿರಂಜೀವಿ, ಜೂನಿಯರ್ ಎನ್‌ಟಿಆರ್ ಸಂತಾಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತೆಲುಗು ಇಂಡಸ್ಟ್ರಿಯಲ್ಲಿ ‘ಸೂಪರ್‌ಸ್ಟಾರ್’ ಎಂದೇ ಖ್ಯಾತರಾಗಿದ್ದ ಹಿರಿಯ ನಟ ಘಟ್ಟಮನೇನಿ ಕೃಷ್ಣ ಅವರು ಮಂಗಳವಾರ ಹೈದರಾಬಾದ್‌ನಲ್ಲಿ ನಿಧನರಾದರು. ಅವರು ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾದ ಒಂದು ದಿನದ ನಂತರ ಕೃಷ್ಣ ಅವರು ತಮ್ಮ 80 ನೇ ವಯಸ್ಸಿನಲ್ಲಿ ನಿಧನರಾದರು.

ಕೃಷ್ಣ ಅವರು ನಟ ಮಹೇಶ್ ಬಾಬು ಅವರ ತಂದೆ. ತೆಲುಗು ಮಹಾನ್‌ ನಟನ ನಿಧನಕ್ಕೆ ಚಿರಂಜೀವಿ, ಜೂನಿಯರ್ ಎನ್‌ಟಿಆರ್, ರಾಕುಲ್ ಪ್ರೀತ್ ಸಿಂಗ್, ನಾನಿ ಮತ್ತು ರಾಧಿಕಾ ಶರತ್ ಕುಮಾರ್ ಅವರಂತಹ ಅನೇಕ ಸೆಲೆಬ್ರಿಟಿಗಳು ತಮ್ಮ ಸಂತಾಪವನ್ನು ಸೂಚಿಸಿದ್ದು ಟ್ವೀಟರ್‌ ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಚಿರಂಜೀವಿ ಟ್ವಿಟರ್‌ನಲ್ಲಿ ತೆಲುಗು ಭಾಷೆಯಲ್ಲಿ ಟಿಪ್ಪಣಿಯನ್ನು ಹಂಚಿಕೊಂಡಿದ್ದು, “ಇದು ಪದಗಳಿಗೆ ಮೀರಿದ ದುಃಖವಾಗಿದೆ. ಸೂಪರ್ ಸ್ಟಾರ್ ಕೃಷ್ಣ ಅವರು ನಮ್ಮನ್ನು ಅಗಲಿದ್ದಾರೆ ಎಂದು ನಂಬಲಾಗದು. ಅವರು ಹಿಮಾಲಯದಷ್ಟು ದೊಡ್ಡ ಹೃದಯವನ್ನು ಹೊಂದಿರುವ ವ್ಯಕ್ತಿ. ಇಂತಹ ವ್ಯಕ್ತಿತ್ವವನ್ನು ಹೊಂದಿರುವುದು ತೆಲುಗು ಚಿತ್ರರಂಗಕ್ಕೆ ಹೆಮ್ಮೆಯ ಸಂಗತಿ, ತೆಲುಗು ಚಿತ್ರರಂಗ ಹೆಮ್ಮೆಪಡುವಂತೆ ಮಾಡಿದ ವ್ಯಕ್ತಿತ್ವಕ್ಕೆ ಭಾವಪೂರ್ಣ ಶ್ರದ್ಧಾಂಜಲಿ! ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ . ನಮ್ಮ ಸಹೋದರ ಮಹೇಶ್ ಬಾಬು, ಅವರ ಕುಟುಂಬ ಮತ್ತು ಅವರ ಅಸಂಖ್ಯಾತ ಅಭಿಮಾನಿಗಳಿಗೆ ನಮ್ಮ ಸಂತಾಪಗಳು” ಎಂದು ಬರೆದಿದ್ದಾರೆ.

ಜೂನಿಯರ್ ಎನ್ಟಿಆರ್ ಕೂಡ ತೆಲುಗಿನಲ್ಲಿ ಟ್ವೀಟ್‌ ಮಾಡಿದ್ದು ಅವರ ಆಲೋಚನೆಗಳು ಮಹೇಶ್ ಮತ್ತು ಅವರ ಕುಟುಂಬದೊಂದಿಗೆ ಇವೆ ಎಂದು ಅವರು ಬರೆದಿದ್ದಾರೆ. “ಸಾಹಸಕ್ಕೆ ಇನ್ನೊಂದು ಹೆಸರೇ ಕೃಷ್ಣಾ. ಹಲವು ಪ್ರಯೋಗಾತ್ಮಕ ಚಿತ್ರಗಳು ಮತ್ತು ವಿಶಿಷ್ಟ ಪಾತ್ರಗಳ ಹೊರತಾಗಿ ತೆಲುಗು ಚಿತ್ರರಂಗಕ್ಕೆ ಹಲವು ತಂತ್ರಗಳನ್ನು ಪರಿಚಯಿಸಿದ ನಿಮ್ಮ ಶ್ರೇಯ ಸದಾ ಸ್ಮರಣೀಯ. ನನ್ನ ಆಲೋಚನೆಗಳು ಮಹೇಶ್ ಅಣ್ಣ ಮತ್ತು ಕುಟುಂಬದೊಂದಿಗೆ. ಓಂ ಶಾಂತಿ. ಅವರು ಎಂದೆಂದಿಗೂ ಸೂಪರ್ ಸ್ಟಾರ್ ,” ಎಂದು ಟ್ವೀಟ್ ಮಾಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!