Saturday, October 1, 2022

Latest Posts

ಕಲಬುರಗಿಯಲ್ಲಿ ವಿತ್ತ ಸಚಿವೆಗೆ ಗೌರವ: ರೈತರಿಗೆ ವಿಶೇಷ ಪರಿಹಾರ ನೀಡುವಂತೆ ಮನವಿ

ಹೊಸದಿಗಂತ ವರದಿ ಕಲಬುರಗಿ: 

ಕಲ್ಯಾಣ ಕರ್ನಾಟಕ ಭಾಗದ ರೈತರು ಹಾಗೂ ಪರಿಶಿಷ್ಟ ವರ್ಗದವರಿಗೆ ವಿಶೇಷ ಪರಿಹಾರ ನೀಡುವಂತೆ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಡಾ. ಅಂಬಾರಾಯ ಅಷ್ಠಗಿ ಮನವಿ ಮಾಡಿದರು.

ಮುಂಬೈನಿಂದ ರಾಯಚೂರಿಗೆ ಕಾರ್ಯಕ್ರಮ ನಿಮಿತ್ತ ತೆರಳುತ್ತಿದ್ದ ಸಚಿವರನ್ನು ಶನಿವಾರ ಕಲಬುರಗಿಯ ರೈಲ್ವೆ ನಿಲ್ದಾಣದಲ್ಲಿ ಭೇಟಿ ಮಾಡಿ, ಸನ್ಮಾನಿಸಿದ ನಂತರ ಮನವಿ ಮಾಡಿದರು. ಜಿಲ್ಲೆಯ ರೈತರ ಬೆಳೆಗಳು ಅತಿವೃಷ್ಟಿಯಿಂದ ಹಾನಿಯಾಗಿರುವ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಇದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಬೆಳಗ್ಗೆ ವಿಶೇಷ ಗೌರವ ನೀಡಿದ್ದಕ್ಕಾಗಿ ಅಷ್ಠಗಿ ಹಾಗೂ ಕಲಬುರಗಿ ಜನತೆಯನ್ನು ಟ್ವೀಟ್ ಮೂಲಕ ಧನ್ಯವಾದ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!