ಮೊನ್ನೆ ಪಾನಿಪೂರಿ, ನಿನ್ನೆ ಮೊಮೋಸ್: ಗೃಹಿಣಿ ಗೆಟಪ್‌ನಲ್ಲಿ ಪಶ್ಚಿಮ ಬಂಗಾಳ ಸಿಎಂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೊನ್ನೆ ರಸ್ತೆ ಬದಿಯಲ್ಲಿ ಪಾನಿಪೂರಿ ಮಾರಾಟ ಮಾಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿನ್ನೆ ಸ್ವತಃ ತಾವೇ ತಮ್ಮ ಕೈಯಾರೆ ಟಿಬೆಟಿಯನ್ ಮೊಮೊಸ್ ತಯಾರಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ದೀದಿ ಮೊಮೊಸ್ ಮಾಡುತ್ತಿರುವ ಫೋಟೋಗಳು ಮತ್ತು ವೀಡಿಯೊವನ್ನು ಪೋಸ್ಟ್ ಮಾಡಿದೆ. ಅವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಡಾರ್ಜಿಲಿಂಗ್‌ನ ಸಣ್ಣ ಅಡುಗೆಮನೆಯಲ್ಲಿ ಕುಳಿತು ಮಮತಾ ಬ್ಯಾನರ್ಜಿ ಸ್ವತಃ ಮೊಮೊಸ್ ತಯಾರಿಸಿ, ಸ್ಥಳೀಯ ಮೊಮೊಸ್ ಮಾರಾಟಗಾರರೊಂದಿಗೆ ಚರ್ಚೆ ನಡೆಸಿದರು. ಆ ಪ್ರದೇಶದಲ್ಲಿ ಟಿಬೆಟಿಯನ್ ಮೊಮೊಸ್‌ಗೆ ಉತ್ತಮ ಬೇಡಿಕೆಯಿದೆ. ಮಮತಾ ಬ್ಯಾನರ್ಜಿ ಅವರು ಅಲ್ಲಿನ ಸ್ವಸಹಾಯ ಸಂಘಗಳೊಂದಿಗೆ ಮಾತನಾಡಿ ಅವರ ಸಮಸ್ಯೆಗಳನ್ನು ಆಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!