ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ್ ಜೋಡೋ ಯಾತ್ರೆಯಲ್ಲಿ ಗಡ್ಡ ಮತ್ತು ಬಿಳಿ ಟಿ-ಶರ್ಟ್‌ನೊಂದಿಗೆ ಕಾಣಿಸಿಕೊಂಡಿದ್ದ ರಾಹುಲ್ ಇದೀಗ ತಮ್ಮ ಅವತಾರವನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಟ್ರಿಮ್ ಮಾಡಿದ ಗಡ್ಡ, ಶಾರ್ಟ್ ಹೇರ್ ಕಟ್..ಇವುಗಳನ್ನು ಮೀರಿ ಸೂಟ್ ಹಾಕಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ವಿಷಯ ಏನಪ್ಪಾ ಅಂದ್ರೆ.. ರಾಹುಲ್ ಒಂದು ವಾರದ ಭೇಟಿಗಾಗಿ ಬ್ರಿಟನ್ ತಲುಪಿದ್ದಾರೆ. ಈ ತಿಂಗಳ 5 ರಂದು ಅವರು ಲಂಡನ್‌ನಲ್ಲಿರುವ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಅವರು ಲಂಡನ್‌ನಲ್ಲಿ ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಐಒಸಿ) ಸದಸ್ಯರನ್ನು ಭೇಟಿಯಾಗಲಿದ್ದಾರೆ. ಉದ್ಯಮಿಗಳ ಜತೆಗೂ ರಾಹುಲ್ ಸಮಾಲೋಚನೆ ನಡೆಸಲಿದ್ದಾರಂತೆ. ಅದಕ್ಕಾಗಿ ಇಷ್ಟೆಲ್ಲ ತಯಾರಿ.
ಭಾರತ್ ಜೋಡೋ ಯಾತ್ರೆಯು ಸೆಪ್ಟೆಂಬರ್ 2022 ರಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಸಮಯದಿಂದ ಜನವರಿ 30 ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಕೊನೆಗೊಳ್ಳುವವರೆಗೆ, ರಾಹುಲ್ ಗಾಂಧಿಯವರ ಚಿತ್ರಣವು ತೀವ್ರವಾಗಿ ಬದಲಾಗಿದೆ. ಈ ಹೊಸ ಅವತಾರದಲ್ಲಿ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಫೋಟೋಗಳನ್ನು ಕಾಂಗ್ರೆಸ್ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.
Our @CambridgeMBA programme is pleased to welcome #India's leading Opposition leader and MP @RahulGandhi of the Indian National Congress.
He will speak today as a visiting fellow of @CambridgeJBS on the topic of "Learning to Listen in the 21st Century". pic.twitter.com/4sTysYlYbC
— Cambridge Judge (@CambridgeJBS) February 28, 2023