ಪ್ರತಿಭಟನೆ ನಡೆಸುತ್ತಿದ್ದ ತೃಣಮೂಲ ಕಾಂಗ್ರೆಸ್ ನಾಯಕರು ಪೊಲೀಸರ ವಶಕ್ಕೆ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ದೆಹಲಿಯಲ್ಲಿ ಧರಣಿ ನಡೆಸುತ್ತಿದ್ದ ತೃಣಮೂಲ ಕಾಂಗ್ರೆಸ್ ಮುಖಂಡರನ್ನು ದೆಹಲಿ ಪೊಲೀಸರು ರಾತ್ರಿ ವಶಕ್ಕೆ ಪಡೆದರು. ಟಿಎಂಸಿ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ 30 ನಾಯಕರನ್ನು ದೆಹಲಿಯ ಕೃಷಿ ಭವನದಲ್ಲಿ ಬಂಧಿಸಲಾಗಿದೆ. ಟಿಎಂಸಿ ಸಂಸದ ಮಹುವಾ ಮೊಯಿತ್ರಾ ಸೇರಿದಂತೆ ಮುಖಂಡರನ್ನು ಪೊಲೀಸರು ಕೃಷಿ ಭವನದಿಂದ ಎಳೆದೊಯ್ದರು. ಅಭಿಷೇಕ್ ಬ್ಯಾನರ್ಜಿ ನೇತೃತ್ವದ ಪಕ್ಷ ಹಿರಿಯ ನಾಯಕರು, ಸಂಸದರು ಮತ್ತು ಶಾಸಕರನ್ನು ಒಳಗೊಂಡ ಟಿಎಂಸಿ ನಿಯೋಗ ಸೋಮವಾರದಿಂದ ದೆಹಲಿಯಲ್ಲಿ ಧರಣಿ ನಡೆಸುತ್ತಿದೆ.

ಗಾಂಧಿ ಜಯಂತಿಯಂದು ಎಂಜಿಎನ್‌ಆರ್‌ಇಜಿಎ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸೋಮವಾರ ರಾಜ್‌ಘಾಟ್‌ನಲ್ಲಿ ಧರಣಿ ಆರಂಭಿಸಿದರು. ಮಂಗಳವಾರ ಜಂತರ್ ಮಂತರ್ ನಲ್ಲಿ ಟಿಎಂಸಿ ನಿಯೋಗ ಪ್ರತಿಭಟನೆ ನಡೆಸಿತು. ನಂತರ, ಕೃಷಿ ಭವನದಲ್ಲಿರುವ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಚೇರಿಗೆ ಟಿಎಂಸಿ ಮೆರವಣಿಗೆ ನಡೆಸಿ, ಸಚಿವರನ್ನು ಭೇಟಿ ಮಾಡುವಂತೆ ಟಿಎಂಸಿ ಮುಖಂಡರು ಕೃಷಿ ಭವನದಲ್ಲಿ ಧರಣಿ ನಡೆಸಿದರು.

ಪೊಲೀಸರು ಮಧ್ಯ ಪ್ರವೇಶಿಸಿ ಟಿಎಂಸಿ ಮುಖಂಡರನ್ನು ಬಂಧಿಸಿ ಕ್ಯಾಬಿನೆಟ್ ಆವರಣದಿಂದ ಕರೆದೊಯ್ದರು. ತಮ್ಮ ನಾಯಕರನ್ನು ದೆಹಲಿ ಪೊಲೀಸರು ಎಳೆದೊಯ್ದಿದ್ದಾರೆ ಎಂದು ಟಿಎಂಸಿ ಸಂಸದ ಸಾಕೇತ್ ಗೋಖಲೆ ವಿಡಿಯೋ ಹಂಚಿಕೊಂಡಿದ್ದಾರೆ. ಟಿಎಂಸಿ ಮುಖಂಡರನ್ನು ಎಳೆದೊಯ್ಯುತ್ತಿರುವ ವಿಡಿಯೋವನ್ನು ಸಂಸದೆ ಮಹುವಾ ಮೊಯಿತ್ರಾ ಹಂಚಿಕೊಂಡಿದ್ದಾರೆ.

ಟಿಎಂಸಿ ನಾಯಕರ ಬಂಧನ ಮತ್ತು ಬಿಡುಗಡೆ

ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರನ್ನು ದೆಹಲಿಯ ಕೃಷಿ ಭವನದಲ್ಲಿ ಬಂಧಿಸಿದ ನಂತರ ದೆಹಲಿ ಪೊಲೀಸರು ಬುಧವಾರ ಮುಂಜಾನೆ ಬಿಡುಗಡೆ ಮಾಡಿದರು.

ಪ್ರಜಾಪ್ರಭುತ್ವದ ಕರಾಳ ದಿನ: ಸಿಎಂ ಮಮತಾ ಬ್ಯಾನರ್ಜಿ

ಅಕ್ಟೋಬರ್ 5 ರಂದು ಕೋಲ್ಕತ್ತಾದ ರಾಜಭವನ ಚಲೋಗೆ ಕರೆ ನೀಡಲಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, “ಇಂದು ಪ್ರಜಾಪ್ರಭುತ್ವಕ್ಕೆ ಕರಾಳ ದಿನ, ಬಿಜೆಪಿ ಸರ್ಕಾರವು ಬಂಗಾಳದ ಜನರನ್ನು ನಡೆಸಿಕೊಂಡ ರೀತಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಸಂಪೂರ್ಣವಾಗಿ ಕಡೆಗಣಿಸಿದಂತಿದೆ” ಎಂದು ಪೋಸ್ಟ್ ಮಾಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!