ಹೊಸದಿಗಂತ ಡಿಜಿಟಲ್ ಡೆಸ್ಕ್ :
ತ್ರಿಪುರಾ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಟೌನ್ ಬರ್ದೋವಾಲಿನಲ್ಲಿ ಮುಖ್ಯಮಂತ್ರಿ ಮಾಣಿಕ್ ಸಹಾ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಎದುರಾಳಿ ಆಶಿಶ್ ಕುಮಾರ್ ಸಹಾ ಅವರನ್ನು 1,257 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಸಹಾ ಜೊತೆಗೆ ಶಿಕ್ಷಣ ಸಚಿವ ರತನ್ ಲಾಲ್ ನಾಥ್ (ಮೋಹನ್‌ಪುರ ಕ್ಷೇತ್ರದಿಂದ), ಪ್ರಣಜಿತ್ ಸಿಂಗ್ ರಾಯ್ (ರಾಧಾಕಿಶೋರಪುರ ಕ್ಷೇತ್ರದಿಂದ), ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಮನೋಜ್ ಕಾಂತಿ ದೇಬ್ (ಕಮಲ್‌ಪುರ ಕ್ಷೇತ್ರದಿಂದ), ತ್ರಿಪುರಾ ವಿಧಾನಸಭೆ ಉಪ ಸ್ಪೀಕರ್ ಬಿಸ್ವಾ ಬಂಧು ಸೇನ್ (ಧರ್ಮನಗರ ಕ್ಷೇತ್ರದಿಂದ) ರಾಜ್ಯ ಅಸೆಂಬ್ಲಿಗೂ ಮರು ಆಯ್ಕೆಯಾದರು.
ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಪ್ಲಬ್ ದೇಬ್ ಅವರನ್ನು ಬದಲಾಯಿಸಿದ್ದರಿಂದ ಕಳೆದ ವರ್ಷ ಮಾಣಿಕ್ ಸಹಾ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ತ್ರಿಪುರ ವಿಧಾನಸಭೆಯ ಮತ ಎಣಿಕೆಯ ಮಧ್ಯೆ ಮಾಣಿಕ್ ಸಹಾ ತ್ರಿಪುರ ಸುಂದರಿ ಮಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ಅವರ ಜೊತೆ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಕೂಡ ಇದ್ದರು. ಫೆಬ್ರವರಿ 16 ರಂದು ತ್ರಿಪುರಾ ವಿಧಾನಸಭಾ ಚುನಾವಣೆ ನಡೆದಿತ್ತು.