Thursday, March 30, 2023

Latest Posts

ಯುಟ್ಯೂಬ್‌ ಸ್ಟಾಕ್‌ ಮ್ಯಾನಿಪ್ಯುಲೇಷನ್: ನಟ ಅರ್ಷದ್‌ ವಾರ್ಸಿ ಸೇರಿ 31 ಜನರನ್ನು ನಿಷೇಧಿಸಿದ ಸೆಬಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಯೂಟ್ಯೂಬ್‌ ಚಾನೆಲ್‌ಗಳ ಮೂಲಕ ಷೇರುಗಳ ಕುರಿತು ತಪ್ಪು ಮಾಹಿತಿ ನೀಡುತ್ತ ಜನರ ಹಾದಿತಪ್ಪಿಸುತ್ತಿದ್ದವರ ವಿರುದ್ಧ ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ (SEBI) ಕ್ರಮ ಕೈಗೊಂಡಿದ್ದು ಮಾರುಕಟ್ಟೆಯಿಂದ ಅವರನ್ನು ನಿಷೇಧಿಸಿದೆ. ಬಾಲಿವುಡ್‌ ನಟ ಅರ್ಷದ್‌ ವಾರ್ಸಿ ಹಾಗು ಅವರ ಪತ್ನಿ ಮಾರಿಯಾ ಗೊರೆಟ್ಟಿ ಮತ್ತು ಸಾಧನಾ ಬ್ರಾಡ್‌ಕಾಸ್ಟ್‌ನ ಪ್ರವರ್ತಕರು ಸೇರಿದಂತೆ 31 ಘಟಕಗಳನ್ನು ಮಾರುಕಟ್ಟೆಯಿಂದ ನಿರ್ಬಂಧಿಸಲಾಗಿದೆ.

ಇವರು ತಪ್ಪು ಮಾಹಿತಿಯನ್ನು ನೀಡುವ ಮೂಲಕ ಕಂಪನಿಯ ಷೇರುಗಳನ್ನು ಖರೀದಿಸಲು ಹೂಡಿಕೆದಾರರಿಗೆ ಶಿಫಾರಸು ಮಾಡುವಂತಹ ವೀಡಿಯೋಗಳನ್ನು ಅಪ್ಲೋಡ್‌ ಮಾಡುತ್ತಿದ್ದರು ಎನ್ನಲಾಗಿದೆ. ಲಭ್ಯವಿರೋ ಮಾಹಿತಿಯ ಪ್ರಕಾರ‌ YouTube ಚಾನಲ್‌ಗಳಾದ ʼದಿ ಅಡ್ವೈಸರ್ʼ ಮತ್ತು ʼಮನಿವೈಸ್ʼ ಗಳು ʼಶಾರ್ಪ್‌ಲೈನ್ ಬ್ರಾಡ್‌ಕಾಸ್ಟ್ʼ ಮತ್ತು ʼಸಾಧನಾ ಬ್ರಾಡ್‌ಕಾಸ್ಟ್‌ನʼ ಷೇರುಗಳ ಕುರಿತಾಗಿ ತಪ್ಪು ಮಾಹಿತಿಯನ್ನು ನೀಡುತ್ತಿದ್ದರು, ದಾರಿ ತಪ್ಪಿಸುವಂತಹ ವಿಡಿಯೋಗಳನ್ನು ಅಪ್ಲೋಡ್‌ ಮಾಡಿದ್ದರು ಎನ್ನಲಾಗಿದೆ. ಅಲ್ಲದೇ ಈ ಕಂಪನಿಯ ಷೇರುಗಳನ್ನು ಖರೀದಿಸುವಂತೆ ಶಿಫಾರಸ್ಸು ಮಾಡುತ್ತಿದ್ದರು ಎನ್ನಲಾಗಿದೆ.

ಹೀಗೆ ಜನರ ಹಾದಿ ತಪ್ಪಿಸುವ ಮೂಲಕ ಅರ್ಷದ್‌ ವಾರ್ಸಿ 29.43 ಲಕ್ಷ ರೂ. ಮತ್ತು ಅವರ ಪತ್ನಿ ಮಾರಿಯಾ ಗೊರೆಟ್ಟಿ 37.56 ಲಕ್ಷ ರೂ. ಲಾಭ ಗಳಿಸಿದ್ದಾರೆ ಎಂದು ಸೆಬಿ ಹೇಳಿದ್ದು ಅವರಿಗೆ ದಂಡ ವಿಧಿಸಿದೆ. ಹೂಡಿಕೆದಾರರನ್ನು ಸೆಳೆಯಲು ಕಂಪನಿಯ ಬಗ್ಗೆ ಸುಳ್ಳು ವಿಷಯವಿರುವ ಯೂಟ್ಯೂಬ್ ವೀಡಿಯೋಗಳನ್ನು ಅಪ್‌ಲೋಡ್ ಮಾಡಲಾಗಿದೆ ಎಂಬ ಬಗ್ಗೆ ದೂರುಗಳು ಸಲ್ಲಿಕೆಯಾಗಿದ್ದವು. ದೂರುಗಳನ್ನು ಸ್ವೀಕರಿಸಿದ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಈ ಕ್ರಮವನ್ನು ಕೈಗೊಂಡಿದೆ. ಸೆಬಿಯ ಈ ಕ್ರಮವನ್ನು ಹಲವರು ಶ್ಲಾಘಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!