ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಯಾಳು ಮಹಿಳೆಯನ್ನು ತಮ್ಮ ಬೆಂಗಾವಲು ವಾಹನದ ಮೂಲಕ ಆಸ್ಪತ್ರೆಗೆ ಕಳುಹಿಸಿ ತ್ರಿಪುರಾ ಮುಖ್ಯಮಂತ್ರಿ ಡಾ.ಮಾಣಿಕ್ ಸಹಾ ಮಾನವೀಯತೆಗೆ ಉದಾಹರಣೆಯಾಗಿ ನಿಂತರು. ಡಾ ಸಹಾ ಪಕ್ಷದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ದಕ್ಷಿಣ ತ್ರಿಪುರಾಗೆ ತೆರಳುತ್ತಿದ್ದ ವೇಳೆ ರಸ್ತೆ ದಾಟಲು ಪ್ರಯತ್ನಿಸಿದಾಗ ಮಹಿಳೆಯೊಬ್ಬರು ಗಾಯಗೊಂಡು ರಸ್ತೆಯಲ್ಲಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ಇದನ್ನು ಕಂಡ ಸಿಎಂ ಬೆಂಗಾವಲು ವಾಃನ ನಿಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವಂತೆ ಸೂಚಿಸಿದರು.
ಕೂಡಲೇ ಗಾಯಾಳು ಮಹಿಳೆ- ಬಿಸ್ವಲಕ್ಷ್ಮಿ ದೆಬ್ಬರ್ಮಾ ಅವರನ್ನು ಬಿಶ್ರಮ್ಗಂಜ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಮುಖ್ಯಮಂತ್ರಿಗಳು ಗಾಯಾಳು ಮಹಿಳೆಯೊಂದಿಗೆ ಮಾತನಾಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ವೈದ್ಯರಿಗೆ ತಿಳಿಸಿದರು.
ಆಕೆಯ ಚಿಕಿತ್ಸೆಗೆ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿಯೂ ಭರವಸೆ ನೀಡಿದರು. ತಲೆಗೆ ಗಾಯಗಳಾಗಿದ್ದು, ನಂತರ ಮಹಿಳೆಯನ್ನು ಉತ್ತಮ ಚಿಕಿತ್ಸೆಗಾಗಿ ಜಿಬಿಪಿ ಆಸ್ಪತ್ರೆಗೆ ರವಾನಿಸಲಾಯಿತು.
ಮುಖ್ಯಮಂತ್ರಿಗಳು ದಕ್ಷಿಣ ತ್ರಿಪುರಾದಿಂದ ಹಿಂದಿರುಗಿದ ನಂತರ ತಕ್ಷಣವೇ ಜಿಬಿಪಿ ಆಸ್ಪತ್ರೆಗೆ ತೆರಳಿ ಮಹಿಳೆಯ ಆರೋಗ್ಯದ ಬಗ್ಗೆ ವಿಚಾರಿಸಿದರು. ಮಹಿಳೆ ಆರೋಗ್ಯ ಈಗ ಸ್ಥಿರವಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದರು. ಗಾಯಗೊಂಡ ಮಹಿಳೆಯ ಚಿಕಿತ್ಸೆಗೆ ಮುಖ್ಯಮಂತ್ರಿಗಳು ಆರ್ಥಿಕ ನೆರವು ನೀಡಿದರು