ಇಂದಿನಿಂದ ಫಿಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ಸ್ ಆರಂಭ, ರೋಚಕ ಪಂದ್ಯಗಳಿಗೆ ಫ್ಯಾನ್ಸ್ ರೆಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕತಾರ್‌ನಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಫಿಫಾ ವಿಶ್ವಕಪ್ ಇದೀಗ ರೋಚಕ ಹಂತಕ್ಕೆ ಬಂದಿದೆ. ಇಂದಿನಿಂದ ಫಿಫಾ ವಿಶ್ವಕಪ್ ಸೆಮಿ ಫೈನಲ್ ಪಂದ್ಯಗಳು ನಡೆಯಲಿದ್ದು, ವಿಶ್ವದ ಬಲಿಷ್ಠ ಎಂಟು ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ.

ಇಂದು ಬ್ರೆಜಿಲ್ ಮತ್ತು ಕ್ರೋವೇಷ್ಯಾ ನಡುವೆ ಮೊದಲ ದಿನದ ಕಾದಾಟ ನಡೆಯಲಿದೆ. ಕ್ರೊವೇಷ್ಯಾ ತಂಡದ ಕೋಚ್ ಈ ಪಂದ್ಯವನ್ನು ಅತೀ ರೋಚಕವಾಗಿ ಇರುತ್ತದೆ ಎಂದು ಬಣ್ಣಿಸಿದ್ದಾರೆ. ಜತೆಗೆ ನಮಗೆ ಬ್ರೆಜಿಲ್ ಎದುರಾಳಿಯಾಗಿರುವುದಕ್ಕೆ ಭಯ ಹುಟ್ಟಿಕೊಂಡಿದೆ ಎಂದಿದ್ದಾರೆ.

ಇಂದು ಬ್ರೆಜಿಲ್ ಮತ್ತು ಕ್ರೊವೇಷ್ಯಾ ಜತೆ ನೆದರ್ಲೆಂಡ್ಸ್ ಮತ್ತು ಅರ್ಜೆಂಟೀನಾ ಪಂದ್ಯ ಕೂಡ ನಡೆಯಲಿದೆ. ದೋಹಾದ ಲುಲೈಸ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ನೆದರ್ಲೆಂಡ್ಸ್ ಮತ್ತು ಅರ್ಜೆಂಟೀನಾ ಪಂದ್ಯಕ್ಕೆ ಅಭಿಮಾನಿಗಳು ಕಾತರರಾಗಿದ್ದಾರೆ. ಅರ್ಜೆಂಟೀನಾ ಲಯೊನೆಲ್ ಮೆಸ್ಸಿ ಅವರಿಗೆ ಬಹುತೇಕ ಇದು ಕೊನೆಯ ವಿಶ್ವಕಪ್ ಟೂರ್ನಿಯಾಗಿದೆ.

ನವೆಂಬರ್ 20 ರಿಂದ ಪಂದ್ಯಗಳು ಆರಂಭವಾಗಿದ್ದು, ಪ್ರತೀ ಪಂದ್ಯವೂ ಅದರದ್ದೇ ರೀತಿಯಲ್ಲಿ ವಿಶೇಷವಾಗಿವೆ. ಅದರಲ್ಲೂ ಏಷ್ಯಾ ಖಂಡದ ತಂಡಗಳು ಈ ಬಾರಿ ತಮ್ಮ ಶಕ್ತಿ ಮೆರೆದಿವೆ. ಜಪಾನ್, ದಕ್ಷಿಣ ಕೊರಿಯಾ ಮತ್ತು ಸೌದಿ ಅರೇಬಿಯಾ ತಂಡಗಳು ವಿಶ್ವದ ಘಟಾನುಘಟಿ ತಂಡಗಳಿಗೆ ಈ ಬಾರಿ ಸೋಲಿನ ರುಚಿ ತೋರಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!