May 26, 2026
Tuesday, May 26, 2026
spot_img

ವಿಜಯ್ ಸಂಪುಟದಲ್ಲಿ ತ್ರಿಶಾ ಡಿಸಿಎಂ? ತಮಿಳುನಾಡು ರಾಜಕೀಯದಲ್ಲಿ ಹೊಸ ಲೆಕ್ಕಾಚಾರ!

ಹೊಸದಿಂಗತ ಡಿಜಿಟಲ್‌ ಡಸ್ಕ್:

ತಮಿಳುನಾಡು ರಾಜಕೀಯದಲ್ಲಿ ನಟ ದಳಪತಿ ವಿಜಯ್ ಸಂಚಲನವನ್ನು ಮೂಡಿಸಿದ್ದು, ದಶಕಗಳ ಇತಿಹಾಸ ಹೊಂದಿರುವ ಡಿಎಂಕೆ ಮತ್ತು ಎಐಎಡಿಎಂಕೆಯಂತಹ ಪ್ರಬಲ ಪಕ್ಷಗಳನ್ನು ಸೋಲಿಸಿ ಹೊಸ ಮೈಲುಗಲ್ಲೊಂದನ್ನು ಸಾಧಿಸಿದ್ದಾರೆ. ಈ ವೇಳೆಯ ಮತ್ತೊಂದು ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಈ ವಿಜಯೋತ್ಸವದ ಸಂಧರ್ಭದಲ್ಲಿಯೇ ಎಲ್ಲರ ಗಮನ ಸೆಳೆಯುತ್ತಿರುವ ಮತ್ತೊಂದು ಹೆಸರು ಎಂದರೆ ಅದು ನಟಿ ‘ತ್ರಿಶಾ’. ಹೌದು, ವಿಜಯ್ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದಂತೆ ನಟಿ ತ್ರಿಶಾ ನೇರವಾಗಿ ಅವರ ಮನೆಗೆ ಭೇಟಿ ನೀಡಿ ಅಭಿನಂದಿಸಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದು ಕೇವಲ ಅಭಿನಂದನೆಗಳಿಗೆ ಸೀಮಿತವಾಗಿಲ್ಲ, ಇದರ ಹಿಂದೆ ದೊಡ್ಡ ರಾಜಕೀಯ ಲೆಕ್ಕಚಾರವಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಪ್ರಸ್ತುತ ಕೇಳಿಬರುತ್ತಿರುವ ಸುದ್ದಿಯೆಂದರೆ ವಿಜಯ್‌ ರಾಜಕೀಯ ಪ್ರವೇಶಿಸಿದ ನಂತರ ತ್ರಿಶಾ ಕೂಡ ಸಕ್ರಿಯವಾಗಿ ರಾಜಕೀಯಕ್ಕೆ ಇಳಿಯಲಿದ್ದು, ವಿಜಯ್‌ ಸಂಪುಟದಲ್ಲಿ ಡಿಸಿಎಂ ಸ್ಥಾನ ಪಡೆಯಲ್ಲಿದ್ದಾರೆ ಎಂಬ ವಂದತಿಗಳು ಹರಿದಾಡುತ್ತಿವೆ.

ವಿಜಯ್ ತಿರುಚಿ ಪೂರ್ವ ಮತ್ತು ಪೆರಂಬೂರು ಎಂಬ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದರು. ನಿಯಮಗಳ ಪ್ರಕಾರ, ಅವರು ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಇದೀಗ ಮೂಲಗಳ ಪ್ರಕಾರ, ವಿಜಯ್ ಅವರಿಂದ ತೆರವಾದ ಸ್ಥಾನದಲ್ಲಿ ತ್ರಿಶಾ ಸ್ಪರ್ಧಿಸುವ ನಿರೀಕ್ಷೆಯಿದೆ. ಅಲ್ಲಿ ಗೆದ್ದ ನಂತರ ಅವರಿಗೆ ಸರ್ಕಾರದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನೀಡಲಾಗುವುದು ಎಂಬ ಊಹಾಪೂಹಗಳು ಓಡಾಡುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !