ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಸಿಎಂ ಜೋಸೆಫ್ ವಿಜಯ್ ನಿನ್ನೆಯಷ್ಟೇ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ವಿಜಯ್ ಬರ್ತ್‌ಡೇಗೆ ನಟಿ ತ್ರಿಷಾ ಹೇಗೆ ವಿಶ್ ಮಾಡ್ತಾರೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ವಿಜಯ್ ಸಿಎಂ ಆಗುವ ಮುನ್ನಾ ದಿನಗಳಲ್ಲಿಯೂ ಪ್ರತೀ ಕಾರ್ಯಕ್ರಮದಲ್ಲಿಯೂ ಅವರ ಜೊತೆ ಕಾಣಿಸಿಕೊಂಡಿದ್ದ ತ್ರಿಷಾ ಈಗ ಬರ್ತ್‌ಡೇಗೆ ವಿಶಸ್ ಕೂಡ ಹಾಕಿಲ್ಲ, ಅವರಿಬ್ಬರ ನಡುವೆ ಬ್ರೇಕಪ್ ಆಗಿರಬಹುದೇನೋ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಕೆಲ ದಿನಗಳಿಂದ ವಿಜಯ್ ಹಾಗೂ ಪತ್ನಿ ಸಂಗೀತಾ ಡಿವೋರ್ಸ್ ಕುರಿತಾದ ಯಾವುದೇ ಸುದ್ದಿ ಬಾರದ ಕಾರಣ ಇಬ್ಬರೂ ಮತ್ತೆ ಒಂದಾಗೋಕೆ ನಿರ್ಧಾರ ಮಾಡಿರಬಹುದೇನೋ ಎಂದು ಫ್ಯಾನ್ಸ್ ಅಂದುಕೊಂಡಿದ್ದಾರೆ. ಇಷ್ಟೇ ಅಲ್ಲದೇ ತ್ರಿಷಾ ಕೂಡ ವಿಜಯ್ ಅವರನ್ನು ಇನ್ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ತ್ರಿಷಾಗೆ ತಮ್ಮ ತಪ್ಪಿನ ಅರಿವಾಗಿ ಹೊರಗೆ ಬಂದಿರಬಹುದು ಎಂದು ಕೆಲವರು ಹೇಳಿದ್ರೆ ವಿಜಯ್‌ಗೆ ಫ್ಯಾಮಿಲಿ ಬೆಲೆ ಅರ್ಥವಾಗಿ ದೂರವಾಗಿರಬಹುದು ಎಂದು ಹೇಳಿದ್ದಾರೆ. ಈ ಬಗ್ಗೆ ವಿಜಯ್ ಅಥವಾ ತ್ರಿಷಾ ಬಹಿರಂಗವಾಗಿ ಮಾತನಾಡಿಲ್ಲ.



