ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌತ್ ಸಿನಿರಂಗದ ಹಾಟ್ ಫೇವರೆಟ್ ನಟಿ ತ್ರಿಶಾ ಕೃಷ್ಣನ್ ಸದ್ಯಕ್ಕೆ ಶೂಟಿಂಗ್, ಪ್ರಚಾರ ಎಲ್ಲ ಬದಿಗಿಟ್ಟು ಲಂಡನ್‌ನಲ್ಲಿ ಜಾಲಿಯಾಗಿ ಕಾಲ ಕಳೆಯುತ್ತಿದ್ದಾರೆ. ಪ್ರೆಂಡ್ಸ್ ಜೊತೆ ಸಿಟಿ ರೌಂಡ್ಸ್ ಹೊಡಿತಾ, ಲಂಡನ್‌ನ ಫೇಮಸ್ ‘ಚೈನಾಟೌನ್’ ಬೀದಿಯಲ್ಲಿ ಕ್ಯಾಶುಯಲ್ ಆಗಿ ವಾಕಿಂಗ್ ಮಾಡ್ತಾ ಎಂಜಾಯ್ ಮಾಡಿದ್ದಾರೆ.
ಸಾಮಾನ್ಯವಾಗಿ ಸಿನಿಮಾಗಳಲ್ಲಿ ಜಗಮಗಿಸುವ ಡ್ರೆಸ್ ಹಾಕೋ ತ್ರಿಶಾ, ಫುಲ್ ಸಿಂಪಲ್ ಲುಕ್‌ನಲ್ಲಿದ್ದರು. ಆದರೆ, ಫ್ರೆಂಡ್ಸ್ ಜೊತೆ ಅಡ್ಡಾಡ್ತಿದ್ದ ತ್ರಿಷಾ ಅವರನ್ನ ಕೆಲ ಫ್ಯಾನ್ಸ್ ಗುರುತಿಸಿಬಿಟ್ಟಿದ್ದಾರೆ. ಸುಮ್ನೆ ಇರ್ದೇ, “ಲಂಡನ್‌ನಲ್ಲಿ ವಾಕ್ ಮಾಡುವಾಗ ಈ ಥರ ಸೆಲೆಬ್ರಿಟಿ ಸಿಕ್ತಾರೆ ಅಂತ ಕನಸಲ್ಲೂ ಅಂದುಕೊಂಡಿರಲಿಲ್ಲ!” ಅಂತ ಕ್ಯಾಪ್ಷನ್ ಹಾಕಿ, ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇಷ್ಟೇ ನೋಡಿ ಕಥೆ, ವಿಡಿಯೋ ಅಪ್ಲೋಡ್ ಆಗ್ತಿದ್ದಂತೆ ಇಂಟರ್ನೆಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು.

ಆದರೆ, ಈ ವಿಡಿಯೋ ನೋಡಿದ ತಕ್ಷಣ ಎಲ್ಲರೂ ಖುಷಿ ಪಡಲಿಲ್ಲ. ಬದಲು, ವಿಡಿಯೋ ಮಾಡಿದವನಿಗೆ ನೆಟ್ಟಿಗರು ಹಾಗೂ ತ್ರಿಶಾ ಫ್ಯಾನ್ಸ್ ಸರಿಯಾಗಿಯೇ ಕ್ಲಾಸ್ ತಗೊಂಡಿದ್ದಾರೆ. “ಅವರು ಫ್ರೆಂಡ್ಸ್ ಜೊತೆ ಪರ್ಸನಲ್ ಟೈಮ್ ಸ್ಪೆಂಡ್ ಮಾಡ್ತಿದ್ದಾರೆ, ನಿಮಗೇನು ಮ್ಯಾನರ್ಸ್ ಇಲ್ವಾ? ಪ್ರತಿಯೊಂದನ್ನೂ ಶೂಟ್ ಮಾಡಿ ಇಂಟರ್ನೆಟ್‌ಗೆ ಹಾಕಲೇಬೇಕಾ?” ಅಂತ ಒಬ್ಬರು ತರಾಟೆಗೆ ತಗೊಂಡರೆ, ಇನ್ನೊಬ್ಬರು “ಇದು ಅವರ ಖಾಸಗಿ ಜೀವನಕ್ಕೆ ಧಕ್ಕೆ ತಂದಂತೆ, ಕ್ಯಾಮೆರಾ ಹಿಡ್ಕೊಂಡು ಹಿಂದೆ ಬೀಳೋದನ್ನ ಬಿಟ್ಟು ನಿಮಗೇನಾದ್ರೂ ಕೆಲಸ ಇದ್ಯಾ?” ಅಂತ ಗರಂ ಆಗಿ ಕಮೆಂಟ್ ಮಾಡಿದ್ದಾರೆ.
ಸದ್ಯಕ್ಕಂತೂ ಲಂಡನ್‌ನಲ್ಲಿ ತ್ರಿಶಾ ಅವರ ಸಿಂಪಲ್ ಲುಕ್ ಒಂದೆಡೆ ಟ್ರೆಂಡ್ ಆಗ್ತಿದ್ದರೆ, ಇನ್ನೊಂದೆಡೆ ಸ್ಟಾರ್‌ಗಳ ಪ್ರೈವೆಸಿ ಬಗ್ಗೆ ದೊಡ್ಡ ಚರ್ಚೆಯೇ ನಡೀತಿದೆ.



