ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಬಾನಿ ಮನೆಯ ಗಣಪತಿ ಹಬ್ಬ ಅಂದ್ಮೇಲೆ ಕೇಳಬೇಕಾ, ಇಡೀ ಬಾಲಿವುಡ್ ಮಂದಿ ಅಲ್ಲಿ ಹಾಜರಾಗಿರ್ತಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಈಗ ನಡೀತಿರೋ ಚರ್ಚೆ ಗಣೇಶನ ಪೂಜೆ ಬಗ್ಗೆ ಅಲ್ಲ, ಬದಲಾಗಿ ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಅವರ ಲುಕ್ ಬಗ್ಗೆ. ಹೌದು, ಪೂಜೆಗೆ ಬಂದಿದ್ದ ಕತ್ರಿನಾ ಅವರ ಫೋಟೋ ಮತ್ತು ವೀಡಿಯೋಗಳು ವೈರಲ್ ಆಗ್ತಿದ್ದಂತೆ, ಕೆಲವರು ಅವರ ಬಾಡಿ ಹಾಗೂ ಮುಖದ ಲುಕ್ ಬಗ್ಗೆ ಟ್ರೋಲ್ ಮಾಡೋಕೆ ಶುರು ಮಾಡಿದ್ದಾರೆ.

ಇಷ್ಟಕ್ಕೂ ಅವರು ಮಾಡಿರೋ ತಪ್ಪಾದರೂ ಏನು? ತಾಯಿಯಾಗಿ ಒಂದು ವರುಷ ಕೂಡ ಆಗಿಲ್ಲ, ಅದಾಗಲೇ ಜನ “ಅಯ್ಯೋ, ಮುಂಚಿನ ತರ ಕತ್ರಿನಾ ಇಲ್ವಲ್ಲಾ, ಚೇಂಜ್ ಆಗ್ಬಿಟ್ಟಿದ್ದಾರೆ” ಎಂದು ಕಮೆಂಟ್ ಹಾಕ್ತಿದ್ದಾರೆ. ಎರಡು ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಮಿಂಚಿರೋ ಒಬ್ಬ ನಟಿಗೆ, ಅದೂ ಈಗಷ್ಟೇ ಮಗುವಿಗೆ ತಾಯಿಯಾಗಿರೋ ಒಬ್ಬ ಹೆಣ್ಣಿಗೆ ಈ ರೀತಿ ಜಡ್ಜ್ ಮಾಡೋದು ಎಷ್ಟರ ಮಟ್ಟಿಗೆ ಸರಿ?
https://www.instagram.com/reel/DdTJ4oQswy_/?utm_source=ig_web_button_share_sheet
ತಾಯ್ತನ ಅಂದರೆ ಸಣ್ಣ ವಿಷಯವೇ ಅಲ್ಲ. ಹೆರಿಗೆಯ ನಂತರ ಹೆಣ್ಣಿನ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ಟ್ರೋಲ್ ಮಾಡೋದು ನಿಜಕ್ಕೂ ಬೇಸರದ ಸಂಗತಿ. ವಯಸ್ಸಾದಂತೆ ಮುಖ ಬದಲಾಗುವುದು, ದೇಹದಲ್ಲಿ ಬದಲಾವಣೆಗಳು ಬರುವುದು ಪ್ರಕೃತಿಯ ನಿಯಮ. ಎಲ್ಲರೂ ಯಾವಾಗಲೂ 20 ವರುಷದ ಹುಡುಗಿಯರ ತರಾನೇ ಇರಬೇಕು ಎಂದು ಬಯಸೋದು ಎಂತಹ ಮೂರ್ಖತನ.

ಇಷ್ಟು ವರುಷ ಗ್ಲಾಮರ್ ಪ್ರಪಂಚದಲ್ಲಿದ್ದು, ಎಲ್ಲರ ಮೆಚ್ಚುಗೆ ಗಳಿಸಿದ ಕತ್ರಿನಾ, ಈಗ ಯಾವುದೇ ಕೃತಕ ಶೋ-ಆಫ್ ಇಲ್ಲದೆ, ತಾವೇನು ಅನ್ನೋದನ್ನ ತುಂಬಾ ನ್ಯಾಚುರಲ್ ಆಗಿ ಒಪ್ಪಿಕೊಂಡು ಕಾನ್ಫಿಡೆಂಟ್ ಆಗಿ ಹೊರಗೆ ಬಂದಿದ್ದಾರೆ. ವಯಸ್ಸನ್ನ ಬಲವಂತವಾಗಿ ತಡೆದು ಹಿಡಿಯೋಕೆ ಹೋಗದೆ, ತಮ್ಮ ನೈಜ ಸೌಂದರ್ಯದೊಂದಿಗೆ ಕಂಫರ್ಟಬಲ್ ಆಗಿ ಇರೋ ಕತ್ರಿನಾ ಅವರ ಈ ಆಟಿಟ್ಯೂಡ್ ನಿಜಕ್ಕೂ ಗ್ರೇಟ್.
ಸೋಶಿಯಲ್ ಮೀಡಿಯಾದ ಜಡ್ಜ್ಮೆಂಟ್ಗಳಿಗೆ ತಲೆಕೆಡಿಸಿಕೊಳ್ಳದೆ ಕತ್ರಿನಾ ತಮ್ಮ ಲೈಫ್ ಎಂಜಾಯ್ ಮಾಡ್ತಿದ್ದಾರೆ, ನಾವೂ ಅಷ್ಟೇ… ಇನ್ನೊಬ್ಬರ ಲುಕ್ಸ್ ಬಗ್ಗೆ ಟ್ರೋಲ್ ಮಾಡೋದು ಬಿಟ್ಟು ಅವರ ಖುಷಿಯನ್ನು ಗೌರವಿಸೋಣ!



