ಆಫ್ರಿಕಾದಲ್ಲಿ ಅಳಿವಿನಂಚಿನತ್ತ ಆನೆ ಸಂತತಿ: $ 50,000 ವ್ಯಯಿಸಿ ದೈತ್ಯ ಆನೆ ಬೇಟೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಿನಕಳೆದಂತೆ ಆಫ್ರಿಕಾ ಖಂಡದಲ್ಲಿ ಆನೆಗಳ ಸಂಖ್ಯೆ ಅಳಿವಿನಂಚಿನತ್ತ ಸಾಗುತ್ತಿದೆ. ಆಫ್ರಿಕಾದ ಬೋಟ್ಸ್ವಾನಾ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ಪ್ರದೇಶವಾಗಿದೆ. ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ, ದೇಶದಲ್ಲಿ ಸುಮಾರು 130,000 ಆನೆಗಳಿವೆ. ಇದು ಆಫ್ರಿಕಾದಲ್ಲಿ ಉಳಿದಿರುವ ಜನಸಂಖ್ಯೆಯ ಮೂರನೇ ಒಂದು ಭಾಗವಾಗಿದೆ ಎಂದು ಅಂದಾಜಿಲಾಗಿದೆ. ಆಟಿಕೆಗಳು, ಆಭರಣಗಳು ಮತ್ತು ಇತರ ಪರಿಕರಗಳನ್ನು ತಯಾರಿಸುವ ಸಲುವಾಗಿ ಆನೆ ದಂತಕ್ಕೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ. ಹಾಗಾಗಿ ಆನೆಗಳ ಬೇಟೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದೀಗ ಬೋಟ್ಸ್ವಾನ ಟ್ರೋಫಿ ಬೇಟೆಗಾರ ದೊಡ್ಡ ಆನೆಯನ್ನು ಕೊಂದಿದ್ದಕ್ಕಾಗಿ ಆಕ್ರೋಶ ವ್ಯಕ್ತವಾಗಿದೆ. ಕೊಲ್ಲಲ್ಪಟ್ಟ ಅತಿದೊಡ್ಡ ಆನೆಯ ಹಲ್ಲು ಸುಮಾರು 200 ಪೌಂಡ್‌ಗಳು ಮತ್ತು ಸುಮಾರು 90 ಕಿಲೋಗ್ರಾಂಗಳಷ್ಟು ತೂಗಿದೆಯಂತೆ. ಬೇಟೆಗಾರ ಆನೆ ಬೇಟೆಗಾಗಿ ಸುಮಾರು 40 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಗಿ ತಿಳಿದುಬಂದಿದೆ. ಈ ಬೇಟೆ ಬೋಟ್ಸ್ವಾನಾದ ಜನರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಮಾಜಿ ಅಧ್ಯಕ್ಷ ಇಯಾನ್ ಖಾಮಾ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೋಟ್ಸ್ವಾನಾದ ಮಾಜಿ ಅಧ್ಯಕ್ಷ ಇಯಾನ್ ಖಾಮಾ ಅವರು ದೇಶದಲ್ಲಿ ವನ್ಯಜೀವಿಗಳನ್ನು ಉತ್ತಮವಾಗಿ ರಕ್ಷಿಸಲು 2014 ರಲ್ಲಿ ರಾಷ್ಟ್ರವ್ಯಾಪಿ ಟ್ರೋಫಿ ಬೇಟೆಯನ್ನು ನಿಷೇಧಿಸಿದ್ದರು. ಖಾಮಾ ಅವರ ಉತ್ತರಾಧಿಕಾರಿ ಮೊಕ್ವಿಟ್ಸಿ ಅವರು 2019 ರಲ್ಲಿ ನಿಷೇಧವನ್ನು ತೆಗೆದುಹಾಕಿದರು. ಕೆಲವು ಪ್ರದೇಶಗಳಲ್ಲಿ, ಆನೆಗಳ ದಾಳಿ ಹಾಗೂ ಬೆಳೆ ಹಾನಿ ಸ್ಥಳೀಯ ಜನರಿಗೆ ಸಮಸ್ಯೆಯಾಗಿ ಪರಿಣಮಿಸಿತ್ತು.

ಆನೆಗಳನ್ನು ಹೀಗೆ ಬೇಟೆಯಾಡಿದರೆ, ನಮ್ಮ ಪ್ರವಾಸೋದ್ಯಮಕ್ಕೆ ಹೇಗೆ ಅಭಿವೃದ್ದಿಯಾಗುತ್ತದೆ ಎಂದು ಪ್ರಶ್ನಿಸಿದರು. ಡೈಲಿ ಮೇಲ್ ವರದಿಯಂತೆ ಲಿಯಾನ್ ಕ್ಯಾಚೆಲ್ಹೋಫರ್ ಎಂಬ ಬೇಟೆಗಾರ ಆನೆಯನ್ನು $ 50,000 ಖರ್ಚುಮಾಡಿ ಬೇಟೆ ಮಾಡಿದ್ದಾರೆ ಎನ್ನಲಾಗಿದೆ. ಆನೆಗೆ ಸುಮಾರು 50 ವರ್ಷ ವಯಸ್ಸಾಘಿದ್ದು, ಬೇಟೆಗಾರನ ಒಂದೇ ಗುಂಡಿಗೆ ಆನೆ ಸಾವನ್ನಪ್ಪಿದೆ ಎಂದು ಖಚಿತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!