ಟಿಆರ್‌ಎಸ್‌ ಶಾಸಕರ ಖರೀದಿ ಪ್ರಕರಣ: ಶಾಸಕ ರೋಹಿತ್ ರೆಡ್ಡಿ ಭದ್ರತೆ ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೊಯಿನಾಬಾದ್ ಫಾರ್ಮ್ ಹೌಸ್ ನಲ್ಲಿ ಟಿಆರ್‌ಎಸ್‌ ಶಾಸಕರ ಖರೀದಿ ವಿಚಾರದಲ್ಲಿ ತಾಂಡೂರು ಶಾಸಕ ಪೈಲಟ್ ರೋಹಿತ್ ರೆಡ್ಡಿ ಭದ್ರತೆ ಹೆಚ್ಚಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ರಾಜ್ಯ ಗೃಹ ಇಲಾಖೆ ರೋಹಿತ್ ರೆಡ್ಡಿಗೆ 4+4 ಗನ್ ಮ್ಯಾನ್ ಗಳು, ಬುಲೆಟ್ ಪ್ರೂಫ್ ವಾಹನವನ್ನ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಸದ್ಯ ರೋಹಿತ್ ರೆಡ್ಡಿಗೆ 2+2 ಭದ್ರತೆ ಇದೆ.

ಟಿಆರ್‌ಎಸ್‌ನ ನಾಲ್ವರು ಶಾಸಕರು ಪಕ್ಷಾಂತರಕ್ಕೆ ಯತ್ನಿಸಿದ್ದಾರೆ ಎಂಬ ಸುದ್ದಿ ತೆಲಂಗಾಣದಲ್ಲಿ ಬಿಸಿ ಹುಟ್ಟಿಸುತ್ತಿದೆ. ಈ ವಿಷಯದಲ್ಲಿ ಟಿಆರ್‌ಎಸ್ ಮತ್ತು ಬಿಜೆಪಿ ಎರಡೂ ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡುತ್ತಲೇ ಇವೆ. ಉಪಚುನಾವಣೆಗೆ ಮುನ್ನ 100 ಕೋಟಿ ರೂಪಾಯಿ ನಿರೀಕ್ಷೆ ಮಾಡಿ ಟಿಆರ್‌ಎಸ್ ಶಾಸಕರನ್ನು ಖರೀದಿಸಲು ಬಿಜೆಪಿ ಸಂಚು ರೂಪಿಸಿದೆ ಎಂಬ ಆರೋಪಿಸಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ದೂರು ಪಡೆದು ಈ ಪ್ರಯತ್ನಗಳನ್ನು ವಿಫಲಗೊಳಿಸಿರುವುದಾಗಿ ಬಹಿರಂಗಪಡಿಸಿದ್ದಾರೆ.

ಪೊಲೀಸರು ಪ್ರಕಾರ, ಕೆಲವು ಟಿಆರ್‌ಎಸ್ ಶಾಸಕರು ಪಕ್ಷ ಬದಲಾಯಿಸಿದರೆ ಹಣ, ಗುತ್ತಿಗೆ ಮತ್ತು ಸ್ಥಾನ ನೀಡುವುದಾಗಿ ಆಮಿಷ ಒಡ್ಡಿದ್ದರು. ಈ ಸಂಬಂಧ ಫರಿದಾಬಾದ್ ದೇವಸ್ಥಾನದ ರಾಮಚಂದ್ರ ಭಾರತಿ, ತಿರುಪತಿಯ ಸಿಂಹಯಾಜಿ ಮತ್ತು ಹೈದರಾಬಾದ್‌ನ ನಂದಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯಲ್ಲಿ ಪೈಲಟ್ ರೋಹಿತ್ ರೆಡ್ಡಿ ಆರೋಪಿಗಳೊಂದಿಗೆ ಮಾತನಾಡಿರುವ ಫೋನ್ ಸಂಭಾಷಣೆಯ ಎರಡು ಆಡಿಯೋಗಳು ವೈರಲ್ ಆಗುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!