Wednesday, July 6, 2022

Latest Posts

ಲಾರಿ- ಬೈಕ್ ಡಿಕ್ಕಿ: ಇಬ್ಬರ ಸಾವು

ಹೊಸದಿಗಂತ ವರದಿ,ಕಲಬುರಗಿ:

ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೆ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಮಿರಿಯಾಣ ಹತ್ತಿರ ನಡೆದಿದೆ.

ರಫೀಕ್ ಸಲೀಂ (35), ಸುಮೀತ್ರಾ (41) ಎಂಬವವರೇ ಮೃತರು ಎಂದು ಗುರುತಿಸಲಾಗಿದೆ. ಮೃತರು ತೆಲಂಗಾಣ, ದ ತಾಂಡೂರ ನಿವಾಸಿಗಳು ಎಂದು ತಿಳಿದುಬಂದಿದೆ.

ಬೈಕ್ ಸವಾರರು ಚಿಂಚೋಳಿಯಿಂದ ತಾಂಡೂರ ಕಡೆಗೆ ಹೊರಟಿದ್ದರು.ಲಾರಿಯೂ ತಾಂಡೂರ ಕಡೆಯಿಂದ ಹೊರಟಿತ್ತು.ಈ ಎರಡ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಇಬ್ಬರು ಸೋವೀಗಿಡಾದ ದುಘ೯ಟನೆ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿರಿಯಾಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss