ಬ್ರಿಟಿಷ್ ಪ್ರಧಾನಿ ರೇಸ್‌ನಿಂದ ಹಿಂದೆ ಸರಿದ ಜಾನ್ಸನ್‌ ಘೋಷಣೆಗೆ ರಿಷಿ ಸುನಕ್ ಪ್ರತಿಕ್ರಿಯೆ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬ್ರಿಟಿಷ್ ಪ್ರಧಾನಿ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕರ ರೇಸ್‌ನಲ್ಲಿ ನಿಲ್ಲುವುದಿಲ್ಲ ಎಂಬ ಬೋರಿಸ್ ಜಾನ್ಸನ್ ಅವರ ನಿರ್ಧಾರವನ್ನು ಭಾರತೀಯ ಮೂಲದ ನಾಯಕ ರಿಷಿ ಸುನಕ್ ಶ್ಲಾಘಿಸಿದರು. ಜೊತೆಗೆ ಅವರ ಅಧಿಕಾರಾವಧಿಯಲ್ಲಿ ಕೋವಿಡ್ ಲಸಿಕೆಗಳ ವಿತರಣೆ, ಬ್ರೆಕ್ಸಿಟ್ ಮತ್ತು ಉಕ್ರೇನ್‌ನಲ್ಲಿ ಯುದ್ಧದಂತಹ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಯುಕೆ ಅಭೂತಪೂರ್ವ ಸವಾಲುಗಳನ್ನು ಎದುರಿಸಿದೆ ಎಂಬುದನ್ನು ತಿಳಿಸಿದರು.

ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ ನಾಯಕನಿಗೆ ಯುಕೆ ಜನರು ಕೃತಜ್ಞರಾಗಿದ್ದಾರೆ ಎಂಬ ಮಾತನ್ನು ಹೇಳಿದರು. ಬ್ರಿಟನ್ ಪ್ರಧಾನಿ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕನ ರೇಸ್‌ನಲ್ಲಿ ಮತ್ತೆ ನಿಲ್ಲುವುದಿಲ್ಲ ಎಂದು ಬೋರಿಸ್ ಜಾನ್ಸನ್ ಹೇಳಿದ್ದಾರೆ, ಆದರೂ ಜನ ಮತ್ತು ದೇಶಕ್ಕೆ ಅವರ ಸೇವೆಗಳು ಮುಂದುವರಿಯಲಿ ಎಂದು ಆಶಿಸುತ್ತೇನೆ ಎಂದರು.

ಬೋರಿಸ್ ಜಾನ್ಸನ್ ಕೆಲವು ತಿಂಗಳ ಹಿಂದೆ ಬ್ರಿಟನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಲಿಜ್ ಟ್ರಸ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಇದೀಗ ಲಿಜ್‌ ಟ್ರಸ್‌ ಕೂಡ ರಾಜೀನಾಮೆ ನೀಡಿದ್ದರಿಂದ, ರಿಷಿ ಸುನಕ್ ಮುಂದಿನ ಬ್ರಿಟಿಷ್ ಪ್ರಧಾನಿ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!