ಕಲಾವಿದನ ಕೈಯ್ಯಲ್ಲರಳಿದ ಕಾಳಿ: ನಾಲ್ಕು ಸಾವಿರಕ್ಕೂ ಹೆಚ್ಚಿನ ದೀಪಗಳೊಂದಿಗೆ ಮಹಾಮಾತೆಯ ಮರಳು ಕಲಾಕೃತಿ ರಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೀಪಾವಳಿಯ ಶುಭ ಸಂದರ್ಭದಲ್ಲಿ, ಒಡಿಶಾ ಮೂಲದ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿಯ ಗೋಲ್ಡನ್ ಬೀಚ್‌ನಲ್ಲಿ 4,045 ದೀಪಗಳನ್ನು ಬಳಸಿ ಕಾಳಿ ದೇವಿಯ ಅದ್ಭುತವಾದ ಮರಳು ಕಲಾಕೃತಿ ರಚಿಸಿದ್ದಾರೆ.

‘ಎಲ್ಲಾ ನಕಾರಾತ್ಮಕತೆಯನ್ನು ಸುಡೋಣ’ ಎಂಬ ಸಂದೇಶದೊಂದಿಗೆ ಪಟ್ನಾಯಕ್ ಅವರು 4,045 ದೀಪಗಳನ್ನು ಕಲಾಕೃತಿಯಲ್ಲಿ ಅಳವಡಿಸಿದ್ದಾರೆ.

ಅವರು 6 ಟನ್ ಮರಳನ್ನು ಬಳಸಿ 4,045 ದೀಪಗಳನ್ನು ಸ್ಥಾಪಿಸುವ ಮೂಲಕ ಕಾಳಿ ದೇವಿಯ 5 ಅಡಿ ಎತ್ತರದ ಮರಳಿನ ಶಿಲ್ಪವನ್ನು ರಚಿಸಿದ್ದಾರೆ. ಮರಳು ಕಲಾ ಸಂಸ್ಥೆಯ ಪಟ್ನಾಯಕ್ ಮತ್ತು ಅವರ ವಿದ್ಯಾರ್ಥಿಗಳು ಶಿಲ್ಪವನ್ನು ಪೂರ್ಣಗೊಳಿಸಲು 5 ಗಂಟೆಗಳನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!