June 27, 2026
Saturday, June 27, 2026
spot_img

ಅಮೆರಿಕನ್ ಟೆಕ್ ದೈತ್ಯರ ರಕ್ಷಣೆಗೆ ನಿಂತ ಟ್ರಂಪ್: ಗೂಗಲ್, ಮೆಟಾ ಮೇಲೆ ತೆರಿಗೆ ವಿಧಿಸಿದರೆ ಆರ್ಥಿಕ ಯುದ್ಧ ಫಿಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೂಗಲ್, ಮೆಟಾ ಮತ್ತು ಅಮೆಜಾನ್‌ನಂತಹ ಅಮೆರಿಕದ ದೈತ್ಯ ತಂತ್ರಜ್ಞಾನ ಕಂಪನಿಗಳನ್ನು ಗುರಿಯಾಗಿಸಿಕೊಂಡು ಹೊಸ ‘ಡಿಜಿಟಲ್ ಸೇವಾ ತೆರಿಗೆ’ (Digital Services Tax) ವಿಧಿಸಲು ಮುಂದಾಗಿರುವ ಯುರೋಪಿಯನ್ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆರ್ಥಿಕ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ಕಂಪನಿಗಳ ಮೇಲೆ ತೆರಿಗೆ ವಿಧಿಸುವ ಯಾವುದೇ ದೇಶದ ಸರಕುಗಳ ಮೇಲೆ ವಾಷಿಂಗ್ಟನ್ ತಕ್ಷಣವೇ ಶೇ. 100 ರಷ್ಟು ಆಮದು ಸುಂಕವನ್ನು ಹೇರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶೇ. 100 ರಷ್ಟು ಆಮದು ಸುಂಕದ ಭೀತಿ

ಸಾಮಾಜಿಕ ಜಾಲತಾಣದಲ್ಲಿ ಯುರೋಪಿಯನ್ ರಾಷ್ಟ್ರಗಳ ಕ್ರಮವನ್ನು ತೀವ್ರವಾಗಿ ಟೀಕಿಸಿರುವ ಟ್ರಂಪ್, ಅತ್ಯಂತ ಕಠಿಣ ಸಂದೇಶ ರವಾನಿಸಿದ್ದಾರೆ. “ಯಾವ ದೇಶವಾದರೂ ನಮ್ಮ ಕಂಪನಿಗಳಿಗೆ ಡಿಜಿಟಲ್ ತೆರಿಗೆ ವಿಧಿಸಿದರೆ, ಆ ದೇಶದಿಂದ ಅಮೆರಿಕಕ್ಕೆ ರಫ್ತಾಗುವ ಪ್ರತಿಯೊಂದು ಸರಕಿನ ಮೇಲೂ ತಕ್ಷಣವೇ ಶೇ. 100 ರಷ್ಟು ಸುಂಕ ಹೇರಲಾಗುವುದು. ಈ ಕಟ್ಟುನಿಟ್ಟಿನ ನೀತಿಯು ಹಳೆಯ ಎಲ್ಲಾ ವ್ಯಾಪಾರ ಒಪ್ಪಂದಗಳನ್ನು ಮೀರಿ ಜಾರಿಗೆ ಬರಲಿದೆ” ಎಂದು ಗುಡುಗಿದ್ದಾರೆ.

ಅಮೆರಿಕನ್ ಕಂಪನಿಗಳೇ ಟಾರ್ಗೆಟ್?

ಇತ್ತೀಚಿನ ದಿನಗಳಲ್ಲಿ ಯುರೋಪ್‌ನ ಹಲವು ದೇಶಗಳು ತಮ್ಮ ಮಾರುಕಟ್ಟೆಯಲ್ಲಿ ಆನ್‌ಲೈನ್ ಜಾಹೀರಾತು ಮತ್ತು ಡಿಜಿಟಲ್ ಸೇವೆಗಳ ಮೂಲಕ ಭಾರಿ ಆದಾಯ ಗಳಿಸುವ ಬಹುರಾಷ್ಟ್ರೀಯ ಸಂಸ್ಥೆಗಳಿಂದ ಹೆಚ್ಚಿನ ತೆರಿಗೆ ವಸೂಲಿ ಮಾಡಲು ಹೊಸ ನಿಯಮಗಳನ್ನು ರೂಪಿಸುತ್ತಿವೆ. ಆದರೆ, ಈ ಡಿಜಿಟಲ್ ತೆರಿಗೆಗಳ ವ್ಯಾಪ್ತಿಗೆ ಬರುವ ಬಹುತೇಕ ಎಲ್ಲಾ ಪ್ರಮುಖ ಕಂಪನಿಗಳು ಅಮೆರಿಕ ಮೂಲದ ಸಂಸ್ಥೆಗಳೇ ಆಗಿರುವುದರಿಂದ, ಇದು ಕೇವಲ ಅಮೆರಿಕದ ತಂತ್ರಜ್ಞಾನ ದೈತ್ಯರನ್ನು ಮಾತ್ರ ಅನ್ಯಾಯವಾಗಿ ಗುರಿಯಾಗಿಸಿಕೊಂಡಿದೆ ಎಂಬುದು ಟ್ರಂಪ್ ವಾದವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !