ಅಮೆರಿಕದಲ್ಲಿ ಹಿಂದು ಜನಾಂಗೀಯ ಹತ್ಯೆ ಸ್ಮಾರಕ ನಿರ್ಮಿಸುವುದಾಗಿ ಭರವಸೆ ನೀಡಿದ ಟ್ರಂಪ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಮೆರಿಕದಲ್ಲಿ ಹಿಂದು ಜನಾಂಗೀಯ ಹತ್ಯೆಯ ಸ್ಮಾರಕ ನಿರ್ಮಿಸುವುದಾಗಿ ಮಾಜಿ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಭರವಸೆ ನೀಡಿದ್ದಾರೆ. ಫ್ಲೋರಿಡಾದಲ್ಲಿ ರಿಪಬ್ಲಿಕನ್ ಹಿಂದೂ ಒಕ್ಕೂಟ (ಆರ್‌ಎಚ್‌ಸಿ) ಆಯೋಜಿಸಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಮೆರಿಕದಲ್ಲಿ ಹಿಂದೂಫೋಬಿಯಾ ಇರುವದನ್ನು ಒಪ್ಪಿಕೊಂಡಿದ್ದಾರೆ.

“2016 ರ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಪಕ್ಷವು ಗೆಲ್ಲಲು ಹಿಂದೂಗಳ ಕಾರಣ. ವಾಡಿಂಗ್ಟನ್‌ ಡಿಸಿಯಲ್ಲಿ ಹಿಂದೂ ಹತ್ಯಾಕಾಂಡದ ಸ್ಮಾರಕವನ್ನು ನಿರ್ಮಿಸುವ ಕಲ್ಪನೆಯನ್ನು ನಾನು ಸಂಪೂರ್ಣವಾಗಿ ಅನುಮೋದಿಸಿದ್ದೇನೆ” ಎಂದು ಟ್ರಂಪ್‌ ಹೇಳಿದ್ದಾರೆ.

“ನಾವು ಹಿಂದೂ ಜನಸಂಖ್ಯೆಯಿಂದ ಬೆಂಬಲವನ್ನು ಹೊಂದಿದ್ದೇವೆ. ಭಾರತದ ಜನರು ಮತ್ತು ಭಾರತದಿಂದ ಹೆಚ್ಚಿನ ಬೆಂಬಲವನ್ನು ಹೊಂದಿದ್ದೇವೆ, . ನಾನು ವಾಷಿಂಗ್ಟನ್ DC ಯಲ್ಲಿ ಹಿಂದೂ ಹತ್ಯಾಕಾಂಡದ ಸ್ಮಾರಕವನ್ನು ನಿರ್ಮಿಸುವ ಕಲ್ಪನೆಯನ್ನು ಸಂಪೂರ್ಣವಾಗಿ ಅನುಮೋದಿಸಿದ್ದೇನೆ. ನಾವು ಅದನ್ನು ಮಾಡಲು ಹೊರಟಿದ್ದೇವೆ” ಎಂದು ಟ್ರಂಪ್ ಹೇಳಿದ್ದಾರೆ.

ಇದಲ್ಲದೆ, ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸುವುದಾಗಿ ಹೇಳಿದ ಟ್ರಂಪ್ ಮತ್ತು 2024 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಭಾರತದೊಂದಿಗೆ ಅಮೆರಿಕದ ಸಂಬಂಧವನ್ನು ಮತ್ತೆ ಮುಂದಿನ ಹಂತಕ್ಕೆ ಕೊಂಡೊಯ್ಯುವುದಾಗಿ ಭರವಸೆ ನೀಡಿದ್ದಾರೆ. ರಿಪಬ್ಲಿಕನ್ ಹಿಂದೂ ಒಕ್ಕೂಟ (ಆರ್‌ಎಚ್‌ಸಿ) ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಅಮೆರಿಕನ್‌ ಹಿಂದುಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!