ಪರ್ತ್‌ನಲ್ಲಿ ಭಾರತ- ಆಫ್ರಿಕಾ ಸೆಣಸಾಟ: ಪಂದ್ಯಕ್ಕಿದೆಯಾ ಮಳೆ ಕಾಟ? ಇಲ್ಲಿದೆ ಹವಾಮಾನ ರಿಪೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್
2022ರ ಟಿ 20 ವಿಶ್ವಕಪ್‌ನಲ್ಲಿ ಪರಿಪೂರ್ಣ ಆರಂಭವನ್ನು ಪಡೆದಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಭಾನುವಾರ ಪರ್ತ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.
ಪಾಯಿಂಟ್ ಟೇಬಲ್​ನಲ್ಲಿ ಮೊದಲೆರಡು ಸ್ಥಾನದಲ್ಲಿರುವ ತಂಡಗಳ ನಡುವಿನ ಫಲಿತಾಂಶವನ್ನು ಇತರ ತಂಡಗಳು ಕುತೂಹಲದಿಂದ ನೋಡುತ್ತಿವೆ. ಗೆದ್ದರರಿಗೆ ಸೆಮೀಸ್‌ ಸ್ಥಾನ ಖಚಿತವಾದರೆ, ಸೋತವರು ಸೆಮೀಸ್‌ ಸ್ಥಾನಕ್ಕಾಗಿ ಇನ್ನುಳಿದ ಎರಡು ಪಂದ್ಯಗಳಲ್ಲಿ ಕಾದಾಡಬೇಕಿರುತ್ತದೆ.
ಟೀಮ್ ಇಂಡಿಯಾ ಎರಡು ಪಂದ್ಯಗಳನ್ನು ಗೆದ್ದು 4 ಅಂಕದೊಂದಿಗೆ (+1.425) ಅಗ್ರ ಸ್ಥಾನದಲ್ಲಿದೆ, ದಕ್ಷಿಣ ಆಫ್ರಿಕಾದ ಎರಡು ಪಂದ್ಯಗಳಲ್ಲಿ ಒಂದು ಮಳೆಯಿಂದ ರದ್ದಾದರೆ, ಮತ್ತೊಂದರಲ್ಲಿ ಗೆದ್ದಿದೆ. ತಂಡವು +5.200 ರನ್​ರೇಟ್​ನೊಂದಿಗೆ 3 ಅಂಕಗಳೊಂದಿಗೆ ಎರಡನೇ ಸ್ಥಾನಲ್ಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತರೆ ದ್ವಿತೀಯ ಸ್ಥಾನಕ್ಕೆ ಕುಸಿಯಲಿದೆ.

ಪರ್ತ್‌ನಲ್ಲಿ ಮಳೆಯಾಗುವ ಸಾಧ್ಯತೆಗಳೇನು?

ಈ ವರ್ಷದ ಟೂರ್ನಿಯಲ್ಲಿ ಹವಾಮಾನವು ಪ್ರಮುಖ ಪಾತ್ರವಹಿಸುತ್ತಿದೆ. ಅನೇಕ ಪಂದ್ಯಗಳು ವಾಶ್‌ ಔಟ್‌ ಆಗಿ ಪ್ರಮುಖ ತಂಡಗಳು ಸಂಕಷ್ಟಕ್ಕೆ ಸಿಲುಕಿವೆ. ಆದಾಗ್ಯೂ, ಭಾರತ ಮತ್ತು ದಕ್ಷಿಣ ಆಫ್ರಿಕಾದ ಹಣಾಹಣಿಯಲ್ಲಿ ಮಳೆ ಕಾಟದ ಸಾಧ್ಯತೆಗಳು ಸದ್ಯಕ್ಕೆ ತೀರಾ ಕಡಿಮೆಯಿದೆ.
ಆಸ್ಟ್ರೇಲಿಯನ್ ಗವರ್ನಮೆಂಟ್ ಬ್ಯೂರೋ ಆಫ್ ಮೆಟಿಯರಾಲಜಿ ಪ್ರಕಾರ, ನಾಳೆ ಬೆಳಗ್ಗೆ ಕೊಂಚ ಮಳೆಯಾಗುವ ಸಾಧ್ಯತೆಯಿದೆ. ಬೆಳಗ್ಗೆ 10 ಗಂಟೆಯಿಂದ 12 ಗಂಟೆ ಸುಮಾರಿನಲ್ಲಿ ಮಳೆ ಆಗಬಹುದು. ಆದರೆ, ನಂತರ ಮಳೆ ಸಾಧ್ಯತೆ ಇಲ್ಲವೆಂದು ಹೇಳಲಾಗಿದೆ. ಈ ಪಂದ್ಯ ಆಸಿಸ್ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ‌ (ಭಾರತೀಯ ಕಾಲಮಾನ 4.30) ಕ್ಕೆ ಶುರುವಾಗಲಿದೆ. ಹಾಗಾಗಿ ಪಂದ್ಯಕ್ಕೆ ಮಳೆ ಅಡ್ಡಯಾಗಲಾರದು ಎಂದು ಇಲಾಖೆ ತಿಳಿಸಿದೆ.
ಪಂದ್ಯಕ್ಕೆ ತಂಡಗಳು ಇಂತಿವೆ:
ಭಾರತ:
ರೋಹಿತ್ ಶರ್ಮಾ (ಸಿ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ರಿಷಬ್ ಪಂತ್, ಯುಜ್ವೇಂದ್ರ ಚಾಹಲ್, ದೀಪಕ್ ಹೂಡಾ.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ (ಸಿ), ರಿಲೀ ರೊಸೊವ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ, ಲುಂಗಿ ಎನ್‌ಗಿಡಿ, ಹೆನ್ರಿಚ್ ಕ್ಲಾಸೆನ್, ತಬ್ರೈಜ್ ಶಮ್ಸಿ, ರೆಕ್ಸ್ ಜಾನ್ಸೆನ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!