ಟೊಮ್ಯಾಟೊ ಸಿಪ್ಪೆಯಿಂದ ಕಿಡ್ನಿ ಸ್ಟೋನ್ಸ್ ಆಗುವ ಸಾಧ್ಯತೆ ಇದೆ ಅನ್ನೋ ಮಾತು ಕೇಳ್ತಿರೋದು ಇದೇ ಮೊದಲಲ್ಲ, ‘ಈಗ ಟೊಮ್ಯಾಟೊ ಬಗ್ಗೆ ಮಾತೇ ಆಡೋ ಹಾಗಿಲ್ಲ, ಟೊಮ್ಯಾಟೊ ಸಿಪ್ಪೆ ತಿನ್ನೋದಕ್ಕೂ ಟೊಮ್ಯಾಟೊ ಕೊಳ್ಳಬೇಕಲ್ಲ’ ಎಂದು ನೀವು ತಮಾಷೆ ಮಾಡಬಹುದು.
ಆದರೆ ವಿಷಯ ತಿಳ್ಕೊಳ್ಳಿ, ಟೊಮ್ಯಾಟೊ, ಬೀಜ ಹಾಗೂ ಅದರ ಸಿಪ್ಪೆಯಿಂದಾಗಿ ಕಿಡ್ನಿ ಸ್ಟೋನ್ಸ್ ಆಗುತ್ತದಾ?
ಖಂಡಿತಾ ಇಲ್ಲ ಎಂದು ವೈದ್ಯರು ಹೇಳುತ್ತಾರೆ. ಟೊಮ್ಯಾಟೊ ಆರೋಗ್ಯಕ್ಕೆ ಒಳ್ಳೆಯದು, ಆದರೆ ಯಾವುದೂ ಅತಿಯಾಗಬಾರದು. ಈಗಾಗಲೇ ಕಿಡ್ನಿ ಸ್ಟೋನ್ಸ್ ಸಮಸ್ಯೆಯಿಮದ ಬಳಲುತ್ತಿರುವವರಿಗೆ ಟೊಮ್ಯಾಟೊದಿಂದ ಸಮಸ್ಯೆ ಆಗಬಹುದು.