August 15, 2026
Saturday, August 15, 2026
spot_img

ಚಿಂತೆ ಬಿಡಿ ತಿಂಡಿ ಮಾಡಿ 20 | ಇಂದೇ ತಿಂಡಿಗೆ ಟ್ರೈ ಮಾಡಿ ಸಬ್ಬಕ್ಕಿಯ ಡ್ರೈ ಒಗರಣೆ, ಒಂದು ಬಾರಿ ಮಾಡಿದ್ರೆ ಮತ್ತೆ ಮಾಡ್ತೀರಿ

ಸಾಮಾಗ್ರಿಗಳು
ಸಬ್ಬಕ್ಕಿ
ಈರುಳ್ಳಿ
ಹಸಿಮೆಣಸಿನಕಾಯಿ
ಶೇಂಗಾ
ಎಣ್ಣೆ
ಸಾಸಿವೆ
ಜೀರಿಗೆ
ಉಪ್ಪು

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಸಿಮೆಣಸು ಹಾಕಿ ಒಗರಣೆ ಮಾಡಿ, ನಂತರ ಈರುಳ್ಳಿ ಹಾಗೂ ಉಪ್ಪು ಹಾಕಿ ಬಾಡಿಸಿ
ಇತ್ತ ಬಾಣಲೆಗೆ ಶೇಂಗಾ ಹಾಕಿ ಹುರಿದುಕೊಳ್ಳಿ. ಇದು ತಣ್ಣಗಾದ ನಂತರ ಪುಡಿಮಾಡಿ ಇಟ್ಟುಕೊಳ್ಳಿ
ಸಬ್ಬಕ್ಕಿಯನ್ನು ಕನಿಷ್ಠ ಐದು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಇಟ್ಟಿರಬೇಕು
ನೆಂದ ಸಬ್ಬಕ್ಕಿಯ ನೀರು ಸೋಸಿ ಇದಕ್ಕೆ ಶೇಂಗಾ ಪುಡಿ ಹಾಕಿ ಮಿಕ್ಸ್‌ ಮಾಡಿ ಇಡಿ
ನಂತರ ಒಗರಣೆ ಆದ ನಂತರ ಅದಕ್ಕೆ ಸಬ್ಬಕ್ಕಿ ಹಾಕಿ ಮಿಕ್ಸ್‌ ಮಾಡಿ, ಇದು ಟ್ರಾನ್ಸ್‌ಪರೆಂಟ್‌ ಆಗಬೇಕು
ಆಗ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್‌ ಮಾಡಿದ್ರೆ ತಿಂಡಿ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !