RECIPE| ಸಿಹಿ ತಿಂಡಿ ಬೇಕಾ..ಈ ರೀತಿ ಮಾಡಿನೋಡಿ ಬಾಳೆಹಣ್ಣಿನ ಪಾಯಸ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಳೇ ಹಣ್ಣಿನ ಪಾಯಸ ಒಂದು ಅದ್ಭುತ ರುಚಿಕೊಡುತ್ತದೆ. ರುಚಿ ರುಚಿಯಾದ ಬಾಳೆಹಣ್ಣಿನ ಪಾಯಸವನ್ನು ಈ ರೀತಿ ಮಾಡಿನೋಡಿ

ಬೇಕಾಗುವ ಸಾಮಾಗ್ರಿ: ಸರಿಯಾಗಿ ಹಣ್ಣಾದ ಬಾಳೆಹಣ್ಣು -6, ಗೋಡಂಬಿ, ಏಲಕ್ಕಿ, ದ್ರಾಕ್ಷಿ, ಲವಂಗ, ಹಾಲು ಒಂದು ಲೀಟರ್‌, ಎರಡು ಕಪ್‌ ಸಕ್ಕರೆ, ಕೇಸರಿ.

ಮಾಡುವ ವಿಧಾನ: ಬಾಳೆಹಣ್ಣಿನ ಸಿಪ್ಪೆ ಸುಲಿದು, ಮಿಕ್ಸಿಯಲ್ಲಿ ನಯವಾಗಿ ರುಬ್ಬಿಟ್ಟುಕೊಳ್ಳಿ. ಗೋಡಂಬಿ, ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ. ಸಕ್ಕರೆಯೊಂದಿಗೆ ಏಲಕ್ಕಿ ಹಾಗೂ ಲವಂಗ ಜಜ್ಜಿಟ್ಟುಕೊಳ್ಳಿ. ಕೇಸರಿಯನ್ನು ಕಾಲು ಕಪ್‌ ಹಾಲಿನಲ್ಲಿ ನೆನೆಯಲು ಇಡಿ. ಪಾತ್ರೆಯಲ್ಲಿ ಹಾಲು ಕಾಯಲಿಟ್ಟುಕ್ಕೊಳ್ಳಿ. ಸರಿಯಾಗಿ ಕಾದ ನಂತರ ಸಕ್ಕರೆ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಮಿಕ್ಸಿ ಜಾರ್‌ನಲ್ಲಿದ್ದ ಬಾಳೆಹಣ್ಣಿನ ಪೇಸ್ಟ್‌ ಸೇರಿಸಿ ಸರಿಯಾಗಿ ಮಿಶ್ರ ಮಾಡಿ ಐದು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿಕೊಳ್ಳಿ. ಹುರಿದಿಟ್ಟ ಗೋಡಂಬಿ, ದ್ರಾಕ್ಷಿಯನ್ನು ಸೇರಿಸಿ. ಏಲಕ್ಕಿ ಹಾಗೂ ಲವಂಗದ ಪುಡಿಯನ್ನು ಸೇರಿಸಿ. ಕೇಸರಿ ಹಾಲನ್ನು ಸೇರಿಸಿ ಒಂದೈದು ನಿಮಿಷ ಕುದಿಯಲು ಬಿಡಿ. ನಂತರ ಕೆಳಗಿಟ್ಟು ತಣ್ಣಾಗಗಲು ಬಿಡಿ. ರುಚಿ ರುಚಿಯಾದ ಬಾಳೆಹಣ್ಣಿನ ಪಾಯಸ ರೆಡಿ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!