ತರಕಾರಿ ಇಲ್ಲದಿದ್ದಾಗ ಕಾಬುಲ್‌ ಕಡಲೆಯಲ್ಲಿ ಮಾಡಿ ಈ ಟೇಸ್ಟಿ ರೆಸಿಪಿ…

ಕಾಬುಲ್‌ ಕಡಲೆಯಲ್ಲಿ ಉಸ್ಳಿ ಮಾತ್ರವಲ್ಲ ಈ ರೀತಿ ಚನ್ನಾ ಮಸಾಲಾ ಕೂಡ ಮಾಡಬಹುದು…

ಬೇಕಾಗುವ ಸಾಮಾಗ್ರಿಗಳು:

ಕಾಬುಲ್ ಕಡಲೆ(ಹಿಂದಿನ ದಿನ ನೆನಸಿಡಬೇಕು)
ಈರುಳ್ಳಿ
ಟೊಮ್ಯಾಟೋ
ಬೆಳ್ಳುಳ್ಳಿ
ಕೊತ್ತಂಬರಿ
ಅರಿಶಿನ
ಉಪ್ಪು
ಎಣ್ಣೆ
ಗರಂ ಮಸಾಲಾ
ಚಕ್ಕೆ
ಲವಂಗ
ಪಲಾವ್ ಎಲೆ
ಚಿಲ್ಲಿ ಪೌಡರ್

ಮಾಡುವ ವಿಧಾನ:

  • ಮೊದಲಿಗೆ ಒಂದು ಪಾತ್ರೆಯಲ್ಲಿ ಎಣ್ಣೆ, ಈರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೋ ಹಾಕಿ ಚೆನ್ನಾಗಿ ಫ್ರೈ ಮಾಡಿ
  • ನಂತರ ಅದಕ್ಕೆ ಅರಿಶಿನ, ಚಿಲ್ಲಿ ಪೌಡರ್ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ
  • ಬಳಿಕ ಮತ್ತೊಂದು ಪಾತ್ರೆಯಲ್ಲಿ ಎಣ್ಣೆ, ಚಕ್ಕೆ, ಲವಂಗ, ಪಲಾವ್ ಎಲೆ, ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಅದಕ್ಕೆ ರುಬ್ಬಿಕೊಂಡಿರುವ ಟೊಮ್ಯಾಟೋ ಮಿಶ್ರಣವನ್ನು ಹಾಕಿ. ಗರಂ ಮಸಾಲಾ ಹಾಕಿ ಚೆನ್ನಾಗಿ ಕಲಸಿ.
  • ಕೊನೆಯಲ್ಲಿ ಅದಕ್ಕೆ ನೀರು, ಉಪ್ಪು ಹಾಗೂ ನೆನೆಸಿಟ್ಟಿರುವ ಚೆನ್ನಾ ಹಾಕಿ 10 ನಿಮಿಷ ಕುದಿಸಿ ಕೊತ್ತಂಬರಿ ಹಾಕಿದರೆ ಸಿದ್ಧವಾಗಲಿದೆ ಈ ಟೇಸ್ಟಿ ಚನ್ನಾ ಮಸಾಲಾ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!