ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಸಿಹಿ ಸೇವಿಸಿದಾಗ ಸಾಕಷ್ಟು ಜನರಿಗೆ ಹಲ್ಲು ನೋವು ಬರುತ್ತದೆ. ಇದರಿಂದ ಎಷ್ಟೋ ಸಲ ಊಟ ಸೇವಿಸೋಕೆ ಕೂಡ ಆಗೋದಿಲ್ಲ.. ನಿಮಗೂ ಹಲ್ಲು ನೋವಿದ್ರೆ ಬೇರೆ ಔಷಧಗಳ ಬದಲು ಈ ಮನೆಮದ್ದುಗಳನ್ನು ಟ್ರೈ ಮಾಡಿ…
ಪೇರಲೆ ಎಲೆ: ಇದನ್ನು ನೀರಿನಲ್ಲಿ ಹಾಕಿ ಕುದಿಸಿ, ಚೆನ್ನಾಗಿ ಸೋದಿಸಿ ಬಾಯಿ ಮುಕ್ಕಳಿಸುವುದರಿಂದ ಹಲ್ಲು ನೋವು ಕಡಿಮೆ ಮಾಡುತ್ತದೆ.
ಲವಂಗ: ಲವಂಗದ ಪುಡಿಯನ್ನು ಹಲ್ಲು ನೋವಿರುವ ಜಾಗದಲ್ಲಿ ಇಟ್ಟುಕೊಳ್ಳುವುದರಿಂದ ನೋವು ಕಡಿಮೆಯಾಗುತ್ತದೆ.
ಗೋ ಮೂತ್ರ: ಗೋ ಮೂತ್ರದಿಂದ ಬಾಯಿ ಮುಕ್ಕಳಿಸುವುದರಿಂದ ಹಲ್ಲು ನೋವು ಕಡಿಮೆ ಆಗುತ್ತದೆ.
ಉಪ್ಪು ನೀರು: ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪು ಹಾಕಿ ಬಾಯಿ ಮುಕ್ಕಳಿಸುವುದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ.
ಬೆಳ್ಳುಳ್ಳಿ: ಬೆಳ್ಳುಳ್ಳಿ, ಲವಂಗ ಪುಡಿ ಮಾಡಿಕೊಂಡು ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ನೋವಿರುವ ಹಲ್ಲಿನಲ್ಲಿ ಇಟ್ಟುಕೊಳ್ಳಬೇಕು.