September 28, 2026
Monday, September 28, 2026
spot_img

SNACKS | ಸಂಜೆಯ ಚಹಾ ಟೈಮ್‌ಗೆ ಈ ಬಿಸಿ ಬಿಸಿ ಮಸಾಲಾ ಬನ್ ಟ್ರೈ ಮಾಡಿ: ಇದರ ಸಾಫ್ಟ್‌ನೆಸ್‌ಗೆ ನೀವೇ ಫಿದಾ ಆಗ್ತೀರಾ!

ಸಂಜೆಯ ಚಹಾ ಸಮಯಕ್ಕೆ ಏನಾದರೂ ಖಾರ ಮತ್ತು ರುಚಿಕರವಾದ ತಿಂಡಿ ಬೇಕು ಅನಿಸಿದರೆ, ಬೇಕರಿ ಶೈಲಿಯ ಮಸಾಲಾ ಬನ್ ಅತ್ಯುತ್ತಮ ಆಯ್ಕೆ. ಮೃದುವಾದ ಬನ್ ಒಳಗೆ ಈರುಳ್ಳಿ, ಕ್ಯಾರೆಟ್ ಮತ್ತು ಮಸಾಲೆಗಳ ಸುವಾಸನೆ ತುಂಬಿರುವ ಈ ಬನ್ ಅನ್ನು ಓವನ್ ಇಲ್ಲದೆಯೂ ಮನೆಯಲ್ಲೇ ಸುಲಭವಾಗಿ ಮಾಡಬಹುದು.

ಬೇಕಾಗುವ ಸಾಮಗ್ರಿಗಳು:
ಮೈದಾ ಹಿಟ್ಟು / ಗೋಧಿ ಹಿಟ್ಟು
ಡ್ರೈ ಯೀಸ್ಟ್
ಸಕ್ಕರೆ
ಉಗುರುಬೆಚ್ಚಗಿನ ಹಾಲು ಅಥವಾ ನೀರು
ಎಣ್ಣೆ / ಬೆಣ್ಣೆ
ಸಣ್ಣಗೆ ಹೆಚ್ಚಿದ ಈರುಳ್ಳಿ
ಹಸಿ ಮೆಣಸಿನಕಾಯಿ
ತುರಿದ ಕ್ಯಾರೆಟ್
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
ಕರಿಬೇವು
ಜೀರಿಗೆ
ಗಸಗಸೆ ಮತ್ತು ಬಿಳಿ ಎಳ್ಳು
ಉಪ್ಪು

ಮಾಡುವ ವಿಧಾನ:
ಒಂದು ಬೌಲ್‌ನಲ್ಲಿ ಉಗುರುಬೆಚ್ಚಗಿನ ಹಾಲು, ಸಕ್ಕರೆ ಮತ್ತು ಡ್ರೈ ಯೀಸ್ಟ್ ಹಾಕಿ ಮಿಕ್ಸ್ ಮಾಡಿ ಇದನ್ನು 10 ನಿಮಿಷ ಮುಚ್ಚಿಡಿ. ಯೀಸ್ಟ್ ಉಬ್ಬಿ ನೊರೆ ಬರಬೇಕು. ನಂತರ ಪ್ಯಾನ್‌ಗೆ 2 ಚಮಚ ಎಣ್ಣೆ ಹಾಕಿ ಕಾಯಿಸಿ, ಜೀರಿಗೆ, ಹಸಿ ಮೆಣಸಿನಕಾಯಿ, ಕರಿಬೇವು ಹಾಕಿ ಹುರಿದು, ನಂತರ ಈರುಳ್ಳಿ ಮತ್ತು ಕ್ಯಾರೆಟ್ ಹಾಕಿ ಹಸಿ ವಾಸನೆ ಹೋಗುವವರೆಗೆ 2 ನಿಮಿಷ ಬಾಡಿಸಿಕೊಂಡು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ಉಪ್ಪು ಹಾಕಿ ಒಲೆಯಿಂದ ಇಳಿಸಿ, ತಣ್ಣಗಾಗಲು ಬಿಡಬೇಕು. ಒಂದು ದೊಡ್ಡ ಪಾತ್ರೆಯಲ್ಲಿ ಮೈದಾ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಿದ್ಧಪಡಿಸಿದ ಮಸಾಲೆಯನ್ನು ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಯೀಸ್ಟ್ ಮಿಶ್ರಣವನ್ನು ಹಾಕಿ ಮೃದುವಾಗಿ ಹಿಟ್ಟನ್ನು ಕಲಸಿ. ಹಿಟ್ಟಿಗೆ 1 ಚಮಚ ಬೆಣ್ಣೆ ಅಥವಾ ಎಣ್ಣೆ ಸವರಿ, ಒದ್ದೆ ಬಟ್ಟೆ ಮುಚ್ಚಿ 1 ರಿಂದ 2 ಗಂಟೆಗಳ ಕಾಲ ಬೆಚ್ಚಗಿನ ಜಾಗದಲ್ಲಿ ಇಡಬೇಕು.

ನಂತರ ಉಬ್ಬಿದ ಹಿಟ್ಟನ್ನು ಮತ್ತೊಮ್ಮೆ ಲಘುವಾಗಿ ನಾದಿ, ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ. ಬೇಕಿಂಗ್ ಟ್ರೇಗೆ ಎಣ್ಣೆ ಸವರಿ, ಮತ್ತೆ 20 ನಿಮಿಷ ಮುಚ್ಚಿಡಬೇಕು. ನಂತರ ಬನ್‌ಗಳ ಮೇಲೆ ಸ್ವಲ್ಪ ಹಾಲು ಸವರಿ, ಮೇಲೆ ಬಿಳಿ ಎಳ್ಳು ಮತ್ತು ಗಸಗಸೆಯನ್ನು ಉದುರಿಸಿ. ಕುಕ್ಕರ್ / ಕಡಾಯಿಯ ತಳಕ್ಕೆ ಉಪ್ಪು ಅಥವಾ ಮರಳು ಹಾಕಿ, ಸ್ಟ್ಯಾಂಡ್ ಇಟ್ಟು 10 ನಿಮಿಷ ಪ್ರಿಹೀಟ್ ಮಾಡಿ. ನಂತರ ಬನ್ ತಟ್ಟೆಯನ್ನು ಇಟ್ಟು, ವಿಷಲ್ ಇಲ್ಲದೆ ಮಧ್ಯಮ ಉರಿಯಲ್ಲಿ 20-25 ನಿಮಿಷ ಬೇಕ್ ಮಾಡಬೇಕು. ಬೇಕ್ ಆದ ತಕ್ಷಣ ಬನ್‌ಗಳ ಮೇಲೆ ಸ್ವಲ್ಪ ಬೆಣ್ಣೆ ಸವರಿದರೆ, ಮೃದುವಾದ ಮಸಾಲಾ ಬನ್ ಸವಿಯಲು ಸಿದ್ಧವಾಗುತ್ತದೆ.

Must Read