ಕೇವಲ 10 ನಿಮಿಷದಲ್ಲಿ ಮಾಡಿ ಈರುಳ್ಳಿ ಚಟ್ನಿ: ಇಲ್ಲಿದೆ ಟೇಸ್ಟಿ ರೆಸಿಪಿ

ಬೇಕಾಗಿರುವ ಪದಾರ್ಥಗಳು:

ಈರುಳ್ಳಿ
ಸಾಸಿವೆ
ಉದ್ದಿನ ಬೇಳೆ
ಕಾಯಿ ತುರಿ
ಕರಿ ಬೇವು
ಉಪ್ಪು
ಇಂಗು
ನಿಂಬು ರಸ
ಹಸಿಮೆಣಸಿನಕಾಯಿ
ಒಣಮೆಣಸಿನಕಾಯಿ

ಮಾಡುವ ವಿಧಾನ:

ಮೊದಲು ಈರುಳ್ಳಿಯನ್ನು ಹೆಚ್ಚಿಕೊಂಡು ಚೆನ್ನಾಗಿ ಹುರಿದುಕೊಳ್ಳಿ.
ನಂತರ ಕಾಯಿ ತುರಿಗೆ ಹುರಿದುಕೊಂಡಿರುವ ಈರುಳ್ಳಿ, ಹಸಿಮೆಣಸಿನಕಾಯಿ, ಒಣಮೆಣಸಿನಕಾಯಿ ಮತ್ತು ಇಂಗು ರಸ ಹಾಕಿ ರುಬ್ಬಿಕೊಳ್ಳಿ.
ಬಳಿಕ ಒಂದು ಬಾಣಲಿಯಲ್ಲಿ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕರಿಬೇವು ಹಾಕಿ ಒಗ್ಗರಣೆ ಮಾಡಿ. ರುಬ್ಬಿಕೊಂಡಿರುವ ಮಿಶ್ರಣಕ್ಕೆ ಹಾಕಿ ಬೆರಸಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ನಿಂಬು ರಸ ಹಾಕಿದರೆ ಈರುಳ್ಳಿ ಚಟ್ನಿ ಸವಿಯಲು ಸಿದ್ಧ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!