ಈ ರೀತಿ ಈಸಿಯಾಗಿ ಮಾಡಬಹುದು ಹೆಸರುಬೇಳೆ ವಡೆ: ಇಲ್ಲಿದೆ ರೆಸಿಪಿ

ಬೇಕಾಗಿರುವ ಪದಾರ್ಥಗಳು

ಹೆಸರುಬೇಳೆ
ಹಸಿಮೆಣಸಿನ ಕಾಯಿ
ಬೆಳ್ಳುಳ್ಳಿ
ಈರುಳ್ಳಿ
ಉಪ್ಪು
ಎಣ್ಣೆ
ಈನೋ
ಕೊತ್ತಂಬರಿ
ಉದ್ದಿನಬೇಳೆ
ಕಡಲೆಬೇಳೆ

ಮಾಡುವ ವಿಧಾನ

  • ಕನಿಷ್ಠ 4-5 ಗಂಟೆಗಳ ಕಾಲ ಹೆಸರುಬೇಳೆ ನೆನೆಸಿಡಿ.
  • ಒಂದು ಸಣ್ಣ ಬಾಣಲಿಯಲ್ಲಿ ಎಣ್ಣೆ, ಉದ್ದಿನಬೇಳೆ, ಕಡಲೆಬೇಳೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ.
  • ಬಳಿಕ ನೀರು ಶೋಧಿಸಿ ಅದಕ್ಕೆ ಹಸಿಮೆಣಿಸಿನ ಕಾಯಿ, ಉಪ್ಪು, ಬೆಳ್ಳುಳ್ಳಿ ಹಾಕಿ ರುಬ್ಬಿಕೊಳ್ಳಿ.
  • ನಂತರ ರುಬ್ಬಿದ ಮಿಶ್ರಣಕ್ಕೆ ಒಗ್ಗರಣೆ, ಈರುಳ್ಳಿ, ಕೊತ್ತಂಬರಿ, ಈನೋ ಹಾಕಿ ಮಿಕ್ಸ್‌ ಮಾಡಿ.
  • ಒಂದು ಬಾಣಲಿಯಲ್ಲಿ ಎಣ್ಣೆ ಕಾಯಿಸಿ, ಅದಕ್ಕೆ ಹೆಸರುಬೇಳೆ ಮಿಶ್ರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಎಣ್ಣೆಯಲ್ಲಿ ಕರಿದರೆ ರುಚಿಯಾದ ಹೆಸರುಬೇಳೆ ವಡೆ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!