Sunday, August 14, 2022

Latest Posts

ಕೊಬ್ಬರಿ ಬರ್ಫಿ ಮಾಡೋದು ಇಷ್ಟೊಂದು ಸುಲಭನಾ? ಹಾಗಿದ್ದರೆ ಇಂದೇ ಒಮ್ಮೆ ಟ್ರೈ ಮಾಡಿ

ಕೊಬ್ಬರಿ ಬರ್ಫಿ ಅಂದರೆ ಯಾರಿಗಿಷ್ಟ ಇಲ್ಲ ಹೇಳಿ.. ಮಕ್ಕಳ ಫೇವರೇಟ್ ಸಿಹಿ ತಿಂಡಿಯನ್ನು ಇಂದೇ ಮಾಡಿ ಕೊಡಿ

ಬೇಕಾಗಿರುವ ಪದಾರ್ಥಗಳು:

ತೆಂಗಿನ ತುರಿ ಅಥವಾ ಒಣ ತೆಂಗಿನಕಾಯಿ ತುರಿ
ಸಕ್ಕರೆ
ಹಾಲು
ಏಲಕ್ಕಿ ಪುಡಿ
ಬಾದಾಮಿ
ದ್ರಾಕ್ಷಿ
ಕೇಸರಿ ಹೂವು
ತುಪ್ಪ

ಮಾಡುವ ವಿಧಾನ:

  • ಮೊದಲಿಗೆ ಒಂದು ಬಾಣಲಿಯಲ್ಲಿ ತೆಂಗಿನ ತುರಿ, ಸಕ್ಕರೆ, ಹಾಲು ಹಾಕಿ ಚೆನ್ನಾಗಿ ಕಲಸಿ.
  • ನಂತರ ಸಣ್ಣ ಬಾಣಲಿಯೊಂದರಲ್ಲಿ ತುಪ್ಪ, ಸಣ್ಣದಾಗಿ ಹೆಚ್ಚಿದ ಬಾದಾಮಿ, ದ್ರಾಕ್ಷಿ ಹಾಕಿ ಹುರಿಯಿರಿ. ನಂತರ ಅದನ್ನು ಕೊಬ್ಬರಿ ಮಿಶ್ರಣಕ್ಕೆ ಹಾಕಿ ಏಲಕ್ಕಿ, ಕೇಸರಿ ಹೂವು ಸೇರಿಸಿ ಕಲಸಿ.
  • ಈಗ ಬರ್ಫಿ ಸ್ವಲಪ್ ದಪ್ಪ ಹದಕ್ಕೆ ಬರುವವರೆಗೆ ಚೆನ್ನಾಗಿ ಕಲಸಿಕೊಳ್ಳಿ. ನಂತರ ಸ್ವಲ್ಪ ತಣ್ಣಗಾಗಲು ಬಿಟ್ಟು ಅದನ್ನು ತುಪ್ಪ ಸವರಿದ ತಟ್ಟೆಯ ಮೇಲೆ ಒಂದೇ ಹದಕ್ಕೆ ತಟ್ಟಿಕೊಂಡು ನಿಮ್ಮಿಷ್ಟದ ಆಕಾರಕ್ಕೆ ಕಟ್ ಮಾಡಿದರೆ ಆಯ್ತು..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss