Monday, September 26, 2022

Latest Posts

ಮೆಕ್ಸಿಕೋದಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ: ವ್ಯಕ್ತಿ ಸಾವು, ಸುನಾಮಿ ಸಂಕಷ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೆಕ್ಸಿಕೋದ ನೈಋತ್ಯ ಕರಾವಳಿಯಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಒಬ್ಬ ವ್ಯಕ್ತಿ ಸಾವನ್ನಪ್ಪಿರುವುದಾಗಿ ಮೆಕ್ಸಿಕೋ ಹವಾಮಾನ ಇಲಾಖೆ ತಿಳಿಸಿದೆ. ಭೂವೈಜ್ಞಾನಿಕ ಸಮೀಕ್ಷೆಯ ಮಾಹಿತಿಯ ಪ್ರಕಾರ, ಮೈಕೋವಾಕನ್ ರಾಜ್ಯದ ಕರಾವಳಿ ತೀರದ ಸಮೀಪದಲ್ಲಿ ಭೂಕಂಪದ ಕೇಂದ್ರಬಿಂದು ಲಭ್ಯವಾಗಿದೆ.

ಕೊಲಿಮಾದ ಭೂಕಂಪದ ಕೇಂದ್ರದಿಂದ ಸುಮಾರು 100 ಕಿಲೋಮೀಟರ್‌ಗಳು (62 ಮೈಲಿಗಳು) ಮಧ್ಯಮ ಹಾಣಿ ಉಂಟಾಗಿದ್ದು, ಭೂಮಿ ಅಲುಗಾಡಿರುವುದಾಗಿ ವರದಿಯಾಗಿದೆ. ಮೆಕ್ಸಿಕೋ ನಗರದಲ್ಲಿ ಭೂಕಂಪದಿಂದಾಗಿ ಕಟ್ಟಡಗಳು ಕುಸಿದಿದ್ದು, ಅವಶೇಷಗಳಡಿ ಸಿಲುಕಿದವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ ಎಂದು ಸ್ಥಳೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ.

ಪಶ್ಚಿಮ ರಾಜ್ಯ ಕೊಲಿಮಾದ ಮಂಜನಿಲ್ಲೊದಲ್ಲಿನ ಶಾಪಿಂಗ್ ಸೆಂಟರ್‌ನಲ್ಲಿ ಒಬ್ಬ ವ್ಯಕ್ತಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ ಎಂದು ಮೆಕ್ಸಿಕೋ ಅಧ್ಯಕ್ಷ ಲೋಪೆಜ್ ಒಬ್ರಡಾರ್ ತಿಳಿಸಿದರು. ನಗರದ ಮೇಯರ್ ಕ್ಲೌಡಿಯಾ ಶೀನ್‌ಬಾಮ್ ನೀಡಿದ ಮಾಹಿತಿ ಪ್ರಕಾರ ಮೆಕ್ಸಿಕೋ ನಗರದಲ್ಲಿ ಇದುವರೆಗೂ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದರು.

ಭೂಕಂಪದ ಬಳಿಕ ಸುನಾಮಿ ಉಂಟಾಗಬಹುದು ಎಂಬ ಎಚ್ಚರಿಕೆಯೂ ಇದೆ. 3 ಮೀಟರ್ (9.8 ಅಡಿ) ವರೆಗಿನ ಅಲೆಗಳು ಮೆಕ್ಸಿಕೊವನ್ನು ಅಪ್ಪಳಿಸುತ್ತವೆ ಮತ್ತು ಕೊಲಂಬಿಯಾ, ಕೋಸ್ಟರಿಕಾ, ಈಕ್ವೆಡಾರ್, ಎಲ್ ಸಾಲ್ವಡಾರ್, ಗ್ವಾಟೆಮಾಲಾ, ಹೊಂಡುರಾಸ್, ನಿಕರಾಗುವಾ, ಪನಾಮ ಮತ್ತು ಪೆರುವಿನ ಪೆಸಿಫಿಕ್ ಕರಾವಳಿಯಲ್ಲಿ ಸುನಾಮಿ ಸಂಭವಿಸಬಹುದು ಎಂದು ಊಹಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!