ಜಪಾನ್​ ಜನತೆಗೆ ಸುನಾಮಿ ಆತಂಕ: ಅಪ್ಪಳಿಸುತ್ತಿದೆ ಭೀಕರ ಅಲೆಗಳು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜಪಾನ್​ ಜನತೆಗೆ ಸುನಾಮಿ ಆತಂಕ ಎದುರಾಗಿದ್ದು, ಇದರ ಜೊತೆಗೆ 7.5 ತೀವ್ರತೆಯಲ್ಲಿ ಪ್ರಬಲ ಭೂಕಂಪನವಾಗಿದೆ.

ಸರಣಿ ಕಂಪನಗಳಿಂದ ಸುನಾಮಿ ಉಲ್ಬಣಗೊಂಡಿದ್ದು, ಜಪಾನ್​ನ ಟೊಯಾಮಾ ನಗರಕ್ಕೆ ಮೊದಲ ಸುನಾಮಿ ಅಲೆ ಬಂದು ಅಪ್ಪಳಿಸಿವೆ ಎಂದು ಹೇಳಲಾಗಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಜಪಾನ್​ನ ಇಶಿಕವಾ ಪ್ರಾಂತ್ಯದ ನೋಟೋ ವಲಯದಲ್ಲಿ ಸ್ಥಳೀಯ ಕಾಲಮಾನ ಸಂಜೆ 4.10ರ ಸುಮಾರಿಗೆ ಭೂಕಂಪನ ಸಂಭವಿಸಿದೆ. ಅಲ್ಲದೆ, ಸರಣಿ ಕಂಪನಗಳಿಂದ ಸುನಾಮಿ ಪ್ರಚೋದನೆಗೊಂಡಿದ್ದು, ಸ್ಥಳೀಯ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಜನರನ್ನು ಎತ್ತರದ ಸ್ಥಳಗಳಿಗೆ ಸ್ಥಳಾಂತರ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೆ, ಜನರಿಗೂ ಕೂಡ ಎಚ್ಚರಿಕೆ ಸಂದೇಶವನ್ನು ರವಾನಿಸಲಾಗಿದೆ.

ಜಪಾನ್ ಕರಾವಳಿಯಲ್ಲಿ ಭೂಕಂಪದ ಕೇಂದ್ರಬಿಂದುವಿನಿಂದ 300 ಕಿಲೋಮೀಟರ್ (190 ಮೈಲುಗಳು) ಒಳಗೆ ಅಪಾಯಕಾರಿ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಹವಾಯಿ ಮೂಲದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ.

ಈಗಾಗಲೇ ಟೊಯೋಮಾ ನಗರಕ್ಕೆ ಮೊದಲ ಸುನಾಮಿ ಅಲೆಗಳು ಅಪ್ಪಳಿಸಿವೆ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಹ ಹರಿದಾಡುತ್ತಿವೆ. ಆದರೆ, ವಿಡಿಯೋಗಳ ಅಧಿಕೃತತೆ ಇನ್ನೂ ಖಚಿತವಾಗಿಲ್ಲ.

ಸದ್ಯಕ್ಕೆ ಸುನಾಮಿ ಅಲೆಗಳು ತೀವ್ರತೆ ಕಡಿಮೆ ಇದೆ. ಆದರೆ, ಯಾವುದೇ ಕ್ಷಣದಲ್ಲಿ ಇದು ತೀವ್ರ ಸ್ವರೂಪವನ್ನು ಪಡೆದುಕೊಳ್ಳಬಹುದು. ಇಶಿಕವಾ ಪ್ರಾಂತ್ಯದ ವಾಜಿಮಾ ಬಂದರಿಗೆ 1.2 ಎತ್ತರದ ಸುನಾಮಿ ಅಲೆಗಳು ಅಪ್ಪಳಿಸಿರುವುದು ಖಚಿತವಾಗಿದೆ. ಅಲ್ಲದೆ, ಅದೇ ಪ್ರದೇಶದಲ್ಲಿ ಐದು ಮೀಟರ್‌ಗಳಷ್ಟು ಎತ್ತರದ ಸುನಾಮಿ ಬರುವ ನಿರೀಕ್ಷೆಯಿದೆ ಎಂದು ಜಪಾನ್ ಹವಾಮಾನ ಸಂಸ್ಥೆ (ಜೆಎಂಎ) ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!