ಕೆಮ್ಮು, ಶೀತ ಶಮನಕ್ಕೆ ಮಾಡಿ ನೋಡಿ ತುಳಸಿ ಕಷಾಯ ರೆಸಿಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಎಲ್ಲೆಡೆ ಮಂಜು ತುಂಬಿದ ವಾತಾವರಣ ಹೀಗಾಗಿ ಅನೇಕರಿಗೆ ಶೀತ ಕೆಮ್ಮಿನ ಸಮಸ್ಯೆಗಳು ಎದುರಾಗುತ್ತಿವೆ. ಈ ಸಮಸ್ಯೆಗೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಲು ಈ ತುಳಸಿ ಕಷಾಯ ರೆಸಿಪಿ ಮಾಡಿ ನೋಡಿ.

ಬೇಕಾಗುವ ಸಾಮಗ್ರಿಗಳು :

ನೀರು
ತುಳಸಿ
ಕಾಳು ಮೆಣಸಿನ ಪುಡಿ
ಕಲ್ಲು ಸಕ್ಕರೆ

ಮಾಡುವ ವಿಧಾನ :

* ಮೊದಲು ಪಾತ್ರೆಗೆ ತುಳಸಿ ಎಲೆ ಹಾಕಿ ಕುದಿಸಿ.
* ನಂತರ ಅದಕ್ಕೆ ಶುಂಠಿ ಪುಡಿ (ಜಜ್ಜಿದ ಶುಂಠಿ), ಕಾಳು ಮೆಣಸಿನ ಪುಡಿ, ಕಲ್ಲು ಸಕಕ್ರೆ ಹಾಕಿ ಚೆನ್ನಾಗಿ ಕುದಿಸಿ.
* ಈಗ ಸೋಸಿ ಬಿಸಿ ಬಿಸಿ ಕಷಾಯ ಕುಡಿಯಿರಿ.

ಈ ಕಷಾಯವನ್ನು ದಿನದಲ್ಲಿ ಮೂರು ಬಾರಿ ಕುಡಿದರೆ ಗಂಟಲು ಕೆರೆತ, ಕೆಮ್ಮು, ಶೀತ ಇವು ಕಡಿಮೆಯಾಗಿ ಆರಾಮ ಅನಿಸುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!