ವೈರಲ್‌ ಫೀವರ್‌, ಋತುಮಾನದ ಕಾಯಿಲೆಗಳಿಂದ ಮುಕ್ತಿ ಕೊಡುವ ತುಳಸಿ ನೀರು!

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ತುಳಸಿ ಅನೇಕ ರೋಗಗಳಿಗೆ ರಾಮಬಾಣ. ಹಲವಾರು ಔಷಧೀಯ ಗುಣಗಳಿಂದಾಗಿ ಇದನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ವಿಶೇಷವಾಗಿ ಋತುಮಾನದ ಕಾಯಿಲೆಗಳಿಂದ ರಕ್ಷಿಸಲು ತುಳಸಿ ಉತ್ತಮ ಔಷಧವಾಗಿ ಕೆಲಸ ಮಾಡುತ್ತದೆ. ವೈರಲ್ ಜ್ವರ ಕೆಮ್ಮು ಶೀತದ ವಿರುದ್ಧ ಹೋರಾಡಲು ಅಗತ್ಯವಿರುವ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಳಸಿ ತುಂಬಾ ಸಹಾಯಕವಾಗಿದೆ.

ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ತುಳಸಿ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು;

1. ತುಳಸಿ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸಮಸ್ಯೆ ದೂರವಾಗುತ್ತದೆ. ಇದು ಮಲಬದ್ಧತೆ ಮತ್ತು ಲೂಸ್ ಮೋಷನ್ ಸಮಸ್ಯೆಯನ್ನು ಸಹ ನಿವಾರಿಸುತ್ತದೆ.

2. ತೂಕದ ಸಮಸ್ಯೆಯಿಂದ ಬಳಲುತ್ತಿರುವವರು ಈ ತುಳಸಿ ಎಲೆ ತಿಂದರೆ ತೂಕ ಕಡಿಮೆಯಾಗುತ್ತದೆ. ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸುವ ಗುಣ ಇದರಲ್ಲಿದೆ.

3. ಮಳೆಗಾಲದಲ್ಲಿ ನಮಗೆ ರೋಗನಿರೋಧಕ ಶಕ್ತಿ ಅತ್ಯಗತ್ಯ. ಅದಕ್ಕಾಗಿ ತುಳಸಿ ಎಲೆ ಮತ್ತು ಅರಿಶಿನ ಪುಡಿಯನ್ನು ನೀರಿನಲ್ಲಿ ಕುದಿಸಿ ಕುಡಿದರೆ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ.

4.ತುಳಸಿ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಯಾವುದೇ ಔಷಧಗಳನ್ನು ಬಳಸದೆ ನೈಸರ್ಗಿಕವಾಗಿ ಸಕ್ಕರೆಯನ್ನು ಕಡಿಮೆ ಆಗಬೇಕು ಅಂದರೆ ತುಳಸಿ ನೀರನ್ನು ಕುಡಿಯಿರಿ.

5. ಹೊಟ್ಟೆನೋವಿನಿಂದ ಬಳಲುತ್ತಿರುವವರಿಗೆ ತುಳಸಿ ನೀರು ತ್ವರಿತ ಪರಿಹಾರ ನೀಡುತ್ತದೆ. ಹೊಟ್ಟೆನೋವಿನಿಂದ ಬಳಲುತ್ತಿರುವವರು ಎಳನೀರಿನಲ್ಲಿ ತುಳಸಿ ಎಲೆಗಳ ರಸ ಮತ್ತು ನಿಂಬೆ ರಸವನ್ನು ಕುಡಿದರೆ ತಕ್ಷಣ ಪರಿಹಾರ ಸಿಗುತ್ತದೆ. ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಎರಡ್ಮೂರು ತುಳಸಿ ಎಲೆಗಳನ್ನು ಬಾಯಲ್ಲಿ ಜಗಿದು ತಿಂದರೆ ಅಸಿಡಿಟಿ ಸಮಸ್ಯೆ ದೂರವಾಗುತ್ತದೆ.

6. ತುಳಸಿ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ, ವಿಷಕಾರಿ ವಸ್ತುಗಳು ದೇಹದಿಂದ ಹೊರಹಾಕಲ್ಪಡುತ್ತವೆ. ಹೆಚ್ಚಿನ ವೈರಲ್ ಸೋಂಕುಗಳು ತಡೆಗಟ್ಟಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!