ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್‌ನಿಂದ ನೀರು ಸೋರಿಕೆಯಾಗುತ್ತಿದ್ದು, ತಾತ್ಕಾಲಿಕ ಗೇಟ್‌ಗಳನ್ನು ಅಳವಡಿಸಲು ತುಂಗಭದ್ರಾ ಡ್ಯಾಂ ಆಡಳಿತ ನಿರ್ಧರಿಸಿದೆ.
19ನೇ ಕ್ರಸ್ಟ್ ಗೇಟ್ಗೆ ತಾತ್ಕಾಲಿಕ ಗೇಟ್‌ಗಳನ್ನು ಅಳವಡಿಸುವ ಕಾರ್ಯ ಇಂದು ಸಂಜೆ ಆರಂಭವಾಗಲಿದೆ. ಸದ್ಯ ಜಲಾಶಯದಲ್ಲಿ ನೀರು ಖಾಲಿಯಾಗುವ ಮುನ್ನ ತಾತ್ಕಾಲಿಕ ಗೇಟ್‌ಗಳನ್ನು ಅಳವಡಿಸುವ ಪ್ರಯತ್ನ ನಡೆಯುತ್ತಿದೆ. ತಜ್ಞರ ತಂಡವು ಗೇಟ್ ಅನ್ನು ನೀರಿಗೆ ಇಳಿಸಲು ಮತ್ತು ತಾತ್ಕಾಲಿಕ ಗೇಟ್ ಅಳವಡಿಸಲು ಪ್ರಯತ್ನಿಸುತ್ತದೆ.
ಹೊಸಪೇಟೆ ಮತ್ತು ಹೊಸಳ್ಳಿಯಲ್ಲಿ ತಾತ್ಕಾಲಿಕ ಗೇಟ್‌ಗಳನ್ನು ಸಿದ್ಧಪಡಿಸಲಾಗಿದೆ. ನಾರಾಯಣ ಇಂಜಿನಿಯರ್ಸ್, ಹಿಂದೂಸ್ತಾನ್ ಇಂಜಿನಿಯರ್ಸ್, ಜಿಂದಾಲ್ ತಂತ್ರಜ್ಞರ ತಂಡದಿಂದ ಗೇಟ್ ಅಳವಡಿಕೆ ಕೆಲಸ ನಡೆಯಲಿದೆ. ಗೇಟ್ ಅಳವಡಿಕೆ ಯಶಸ್ವಿಯಾದರೆ ಅಪಾರ ಪ್ರಮಾಣದ ನೀರು ಉಳಿಯಲಿದೆ. ಹೀಗಾಗಿ ತಾತ್ಕಾಲಿಕ ಹೊಸ ಗೇಟ್ ಅಳವಡಿಕೆಗೆ ಡ್ಯಾಮ್ ಮಂಡಳಿ ಮುಂದಾಗಿದೆ .