ನಾಲ್ಕೈದು ದಿನಗಳಲ್ಲಿ ತುಂಗಭದ್ರಾ ಜಲಾಶಯ ಭರ್ತಿ!

– ಮಂಜುನಾಥ ಗಂಗಾವತಿ
ಕೊಪ್ಪಳ: ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಒಂದೇ ವಾರದಲ್ಲಿ ತುಂಗಭದ್ರಾ ಜಲಾಶಯದಲ್ಲಿ 20 ಕ್ಕೂ ಅಕ ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನು ನಾಲ್ಕೈದು ದಿನಗಳಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ!
ಮಲೆನಾಡಿನಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆ ತುಂಗಭದ್ರಾ ಜಲಾಶಯಕ್ಕೆ ಪ್ರತಿದಿನ 80 ಸಾವಿರಕ್ಕೂ ಅಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜು.2 ರಿಂದ 8 ರವರೆಗೆ ಜಲಾಶಯಕ್ಕೆ 20 ಟಿಎಂಸಿ ನೀರು ಹರಿದು ಬಂದಿದ್ದು, ಇದು ಜುಲೈ ತಿಂಗಳಲ್ಲಿ ದಾಖಲಾದ ಅತ್ಯಕ ಪ್ರಮಾಣವಾಗಿದೆ.
ಜು.2 ರಂದು ಜಲಾಶಯಕ್ಕೆ 6255 ಕ್ಯುಸೆಕ್ ನೀರು ಬಂದರೆ, ಶುಕ್ರವಾರ 75843 ಕ್ಯೂಸೆಕ್ ನೀರು ಹರಿದು ಬಂದಿದೆ. ಇನ್ನು ಎರಡು ದಿನಗಳಲ್ಲಿ 1 ಲಕ್ಷ ಕ್ಯೂಸೆಕ್ ನೀರು ಹರಿದು ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಜಲಾಶಯದ ನೀರಿನ ಮಟ್ಟ 1621.19 ಅಡಿಗೆ ತಲುಪಿದ್ದು, 64 ಟಿಎಂಸಿ ಅಷ್ಟು ನೀರು ಶೇಖರಣೆಯಾಗಿದೆ. ನೀರಿನ ಶೇಖರಣಾ ಮಟ್ಟ 105 ಟಿಎಂಸಿಗಳಿದ್ದು, ಈಗ ಜಲಾಶಯ ಅರ್ಧಕ್ಕೂ ಅಕ ಭರ್ತಿಯಾಗಿದೆ.
ಕಳೆದ ವರ್ಷ ಇದೇ ದಿನದಂದು ಜಲಾಶಯದಲ್ಲಿ 1610 ಅಡಿ ನೀರು ಇತ್ತು ಹಾಗೂ ಜಲಾಶಯದ ಒಳಹರಿವು ಕೇವಲ 4021 ಕ್ಯುಸೆಕ್ ಇತ್ತು ಹಾಗೂ 35.26 ಟಿಎಂಸಿ ನೀರು ಶೇಖರಣೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದಲ್ಲಿ ದುಪ್ಪಟ್ಟು ನೀರು ಸಂಗ್ರಹವಾಗಿದೆ. ಇದು ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸ ಮೂಡಿಸಿದೆ.

ಗರಿಗೆದರಿದ ಕೃಷಿ ಚಟುವಟಿಕೆ:
ಜು.11 ರಿಂದ ಎಡದಂಡೆ ಕಾಲುವೆಗೆ 4100 ಕ್ಯೂಸೆಕ್ ನೀರು ಹಾಗೂ ಬಲದಂಡೆ ಕಾಲುವೆಗೆ 3 ಸಾವಿರಕ್ಕೂ ಅಕ ನೀರು ಜಲಾಶಯ ದಿಂದ ಹೊರಬರಲಿದೆ. ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆಗಳು ಗದಿಗರೆಗಿವೆ. ರೈತರು ಜಮೀನನ್ನು ಹದಗೊಳಿಸಿದ್ದು, ನೀರಿಗಾಗಿ ಕಾಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!