SHOCKING| ಬಾಗುತ್ತಿದೆ ವಿಶ್ವದ ಅತಿ ಎತ್ತರದ ತುಂಗನಾಥ ದೇವಾಲಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶ್ವದ ಅತಿ ಎತ್ತರದ ತುಂಗನಾಥ ಶಿವ ಮಂದಿರ ಬಾಗುತ್ತಿದೆ. ಭಾರತೀಯ ಪುರಾತತ್ವ ಇಲಾಖೆಯ ಪ್ರಕಾರ, ತುಂಗನಾಥ ಶಿವ ದೇವಾಲಯವು ಐದು ಅಥವಾ ಆರು ಡಿಗ್ರಿಗಳಷ್ಟು ಬಾಗಿದೆ. ಗರ್ವಾಲ್ ಹಿಮಾಲಯದ ರುದ್ರಪ್ರಯಾಗ ಜಿಲ್ಲೆಯಲ್ಲಿ 12,800 ಅಡಿ ಎತ್ತರದಲ್ಲಿರುವ ತುಂಗನಾಥ ದೇವಾಲಯವು ವಿಶ್ವದ ಅತಿ ಎತ್ತರದ ಶಿವ ದೇವಾಲಯವೆಂದು ಗುರುತಿಸಲ್ಪಟ್ಟಿದೆ.

ಈಗ ಈ ದೇವಾಲಯ ಐದಾರು ಡಿಗ್ರಿಗಳಷ್ಟು ವಾಲಿರುವುದನ್ನು ಪುರಾತತ್ವ ಇಲಾಖೆ ಪತ್ತೆ ಮಾಡಿದೆ. ಇದೇ ಸಂಕೀರ್ಣದಲ್ಲಿರುವ ಉಳಿದ ಕಟ್ಟಡಗಳು 10 ಡಿಗ್ರಿಯವರೆಗೂ ವಾಲುತ್ತಿವೆ. ಈ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದ್ದು, ದೇವಾಲಯವನ್ನು ಸಂರಕ್ಷಿತ ರಚನೆಗಳ ಪಟ್ಟಿಗೆ ಸೇರಿಸಲು ಮನವಿ ಮಾಡಲಾಗಿದೆ ಎಂದು ಎಎಸ್‌ಐ ಅಧಿಕಾರಿ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ. ತುಂಗನಾಥ ದೇವಾಲಯವನ್ನು 8ನೇ ಶತಮಾನದಲ್ಲಿ ಕಟ್ಕುರಿ ಅರಸರು ನಿರ್ಮಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!