ಜೈಲಿನಲ್ಲಿ ತುನಿಷಾ ಬಾಯ್‌ಫ್ರೆಂಡ್ ಉದ್ದಕೂದಲಿಗೆ ಕತ್ತರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದಿ ಕಿರುತೆರೆ ನಟಿ ತುನಿಷಾ ಶರ್ಮಾ ಬಾಯ್‌ಫ್ರೆಂಡ್ ಶಿಜಾನ್ ಸದ್ಯ ಜೈಲಿನಲ್ಲಿದ್ದು, ನಿಯಮಗಳ ಪ್ರಕಾರ ಆತನ ಉದ್ದ ಕೂದಲಿಗೆ ಕತ್ತರಿ ಬಿದ್ದಿದೆ. ಜೈಲಿನಲ್ಲಿ ಇರುವ ಎಲ್ಲ ಕೈದಿಗಳ ರೀತಿ ಶಿಜಾನ್ ಉದ್ದ ಕೂದಲನ್ನು ಅಧಿಕಾರಿಗಳು ತೆಗೆಯಲು ಸೂಚಿಸಿದ್ದು, ಶಿಜಾನ್ ಇದನ್ನು ವಿರೋಧಿಸಿ ಲಾಯರ್‌ಗೆ ಮಾಹಿತಿ ನೀಡಿದ್ದಾರೆ.

Tunisha Sharma Death Case: Actress had conversation with Sheezan Khan  shortly before hanging, reveals probeಶಿಜಾನ್ ಪರ ವಕೀಲರು ಕೋರ್ಟ್ ಮೊರೆ ಹೋಗಿದ್ದರು. ಶಿಜಾನ್ ಇದೀಗ ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದು, ಕಂಟಿನ್ಯುಟಿಗಾಗಿ ಉದ್ದ ಕೂದಲು ಅವಶ್ಯವಿದೆ. ಮುಖ್ಯ ಪಾತ್ರ ಶಿಜಾನ್ ಮಾಡುತ್ತಿರುವುದರಿಂದ ಕೂದಲಿಗೆ ಕತ್ತರಿ ಬೇಡ ಎಂದು ಮನವಿ ಮಾಡಿದ್ದರು.

Tunisha Sharma Last Post For Sheezan Khan Ali Baba Daastaan E Kabul Actress  Suicide - Filmibeatನ್ಯಾಯಾಲಯ ಜೈಲು ಅಧಿಕಾರಿಗಳ ಪ್ರತಿಕ್ರಿಯೆ ಕೇಳಿದ್ದು, ನಿಯಮದಂತೆ ಎಲ್ಲ ಕೈದಿಗಳ ರೀತಿ ಇವರ ಉದ್ದ ಕೂದಲನ್ನು ಕತ್ತರಿಸಲೇಬೇಕಿದೆ. ಸಿಖ್‌ಗಳಿಗೆ ಮಾತ್ರ ಉದ್ದ ಕೂದಲು ಬಿಡಲು ಅವಕಾಶವಿದೆ. ಮುಸ್ಲಿಮರಿಗೆ ಉದ್ದನೆ ಗಡ್ಡ ಹಾಗೂ ಹಿಂದೂಗಳಿಗೆ ಸಣ್ಣ ಜುಟ್ಟು ಬಿಡಲು ಮಾತ್ರ ಅನುಮತಿ ಇದ್ದು, ಶಿಜಾನ್ ಕೂದಲಿಗೆ ಕತ್ತರಿ ಹಾಕಲೇಬೇಕಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!