VIRAL VIDEO| ಬಸ್ ಚಾಲಕನಿಗೆ ಕಾಟ ಕೊಟ್ಟ ಸೈಕಲ್ ಸವಾರ:ಮುಂದೇನಾಯ್ತು ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಕೊಬ್ಬಿದ ಕೋಳಿಯೊಂದು ಚಿಕನ್‌ ಶಾಪ್‌ ಮುಂದೆ ಪೋಸ್‌ ಕೊಟ್ಟಂತಿದೆ ಈ ವಿಡಿಯೋ. ಒಬ್ಬ ಬಲಿಷ್ಠನ ಮುಂದೆ ನಿಂತು ಅನಾವಶ್ಯಕವಾಗಿ ಹೋಗಿ ಅವನನ್ನು ಕೆರಳಿಸಿದರೆ ಸುಮ್ಮನೆ ಬಿಡುತ್ತಾನಾ? ಆ ದೃಶ್ಯ ಹೇಗಿದೆ ಎಂದು ತಿಳಿಯಲು ಈ ವಿಡಿಯೋ ನೋಡಲೇಬೇಕು.

ವೇಗದೂತ ಬಸ್‌ ಚಲಿಸುವ ವೇಳೆ ಸೈಕಲ್‌ ಸವಾರನೊಬ್ಬ ದಾರಿ ಬಿಡದೆ ಸತಾಯಿಸಿರುವ ದೃಶ್ಯ ವಿಡಿಯೋದಲ್ಲಿ ಕಾಣಬಹುದು. ಮಧ್ಯ ಮಧ್ಯದಲ್ಲಿ ಸೈಕಲ್ ಬ್ರೇಕ್ ಹಾಕುತ್ತಾ ಕಾಟ ಕೊಟ್ಟಿದ್ದಾನೆ. ಸೈಕ್ಲಿಸ್ಟ್ ಬ್ರೇಕ್ ಹಾಕಿದಾಗಲೆಲ್ಲಾ ಬಸ್‌ ಚಾಲಕ ಕೂಡ ಬ್ರೇಕ್ ಹಾಕಿದ್ದಾನೆ.  ಬಸ್‌ ಚಾಲಕನ ಪಿತ್ತ ನೆತ್ತಿಗೇರಿತ್ತೇನೊ ಸೈಕಲ್‌ನ ಹಿಂಭಾಗದ ಟೈರ್‌ಗೆ ಜಸ್ಟ್‌ ಟಚ್‌ ಮಾಡಿದ್ದಾನಷ್ಟೇ ಸೈಕಲ್‌ ಟೈರ್‌ ಉಡೀಸ್‌ ಆಗಿದೆ. ಅದಕ್ಕೆ ಹೇಳೋದು ಉಪ್ಪು ತಿಂದವ ನೀರು ಕುಡಿಯಲೇಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!