Tuesday, March 28, 2023

Latest Posts

ಟರ್ಕಿ ಭೂಕಂಪ: ಸಾವಿನ ಸಂಖ್ಯೆ 16,000ಕ್ಕೆ ಏರಿಕೆ, ರಸ್ತೆಯಲ್ಲೇ ಹೆಣದ ರಾಶಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದೆಂದೂ ಕೇಳರಿಯದಂಥ ಭೂಕಂಪಕ್ಕೆ ಟರ್ಕಿ ಹಾಗೂ ಸಿರಿಯಾ ತುತ್ತಾಗಿದೆ. ಭೀಕರ ಭೂಕಂಪನಕ್ಕೆ ಮೃತಪಟ್ಟವರ ಸಂಖ್ಯೆ ಇದೀಗ 16,000 ಗಡಿ ದಾಟಿದೆ.
ಟರ್ಕಿಯಲ್ಲಿ 12,873 ಮಂದಿ ಮೃತಪಟ್ಟಿದ್ದರೆ ಸಿರಿಯಾದಲ್ಲಿ 3,162 ಮಂದಿ ಮೃತಪಟ್ಟಿದ್ದಾರೆ.

ಹವಾಮಾನ ಪರಿಸ್ಥಿತಿಯಿಂದ ವಿನಾಶದ ಪ್ರಮಾಣ ಹೆಚ್ಚಾಗುತ್ತಿದೆ, ಈಗಾಗಲೇ ಮೃತರ ಸಂಖ್ಯೆ 16 ಸಾವಿರದ ಗಡಿ ದಾಟಿದೆ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಹೇಳಿದ್ದಾರೆ. ರಕ್ಷಣಾ ಕಾರ್ಯ ಮುಂದುವರಿದಿದ್ದು,ಹವಾಮಾನ ಅಡ್ಡಿಯಿಂದ ಕಾರ್ಯಾಚರಣೆ ವಿಳಂಬವಾಗುತ್ತಿದೆ, ರಸ್ತೆಯಲ್ಲೇ ಹೆಣದ ರಾಶಿಯಾಗುತ್ತಿದ್ದು, ವಿಲೇವಾರಿಗೂ ಸಮಯ ಇಲ್ಲದಂತಾಗಿದೆ. ಇದು ಟರ್ಕಿ ಭೂಕಂಪದ ಭೀಕರತೆಗೆ ಸಾಕ್ಷ್ಯವಾಗಿದೆ.

ಕಳೆದೊಂದ ದಶಕದ ಅವಧಿಯಲ್ಲಿ ಸಂಭವಿಸಿದ ಪ್ರಕೃತಿಯ ವಿಕೋಪ ಇದಾಗಿದೆ 2011 ರಲ್ಲಿ ಜಪಾನ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು 20 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!