ಟರ್ಕಿ ಭೂಕಂಪ: ಸಾವಿರಾರು ಜನರ ಬಲಿಗೆ ಬಾಯ್ತೆರೆದಿತ್ತು ರಾಕ್ಷಸಿ ರೂಪಿ ಕಟ್ಟಡಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, 3,600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯೂ ಇದೆ.

Powerful earthquake kills at least 195 people in Turkey, Syria - The Hinduಈ ಭೂಕಂಪನದಲ್ಲಿ ಇಷ್ಟೊಂದು ಮಂದಿ ಪ್ರಾಣ ಕಳೆದುಕೊಂಡಿದ್ದು ಯಾಕೆ? ಭೂಕಂಪನದ ಸಮಯ, ಸ್ಥಳ, ತುಲನಾತ್ಮಕವಾಗಿ ದೋಷ ರೇಖೆ ಹಾಗೂ ಕುಸಿದ ಕಟ್ಟಡಗಳ ದುರ್ಬಲ ನಿರ್ಮಾಣ ಈ ಸಾವು ನೋವಿಗೆ ಕಾರಣವಾಗಿದೆ.

Turkey Earthquake Pictures: Buildings Flattened, Many Dead in Major Quake -  Bloombergಟರ್ಕಿಯ ಸಿರಿಯನ್ ಗಡಿ ಬಳಿ ಭೂಕಂಪನ ಸಂಭವಿಸಿದ್ದು, 3,600 ಮಂದಿ ಮೃತಪಟ್ಟಿದ್ದಾರೆ. ಇದು ಅತ್ಯಂತ ಜನವಸತಿ ಪ್ರದೇಶವಾಗಿದೆ. ಇನ್ನು ಭೂಕಂಪನದ ಸಮಯ ಬೆಳಗ್ಗೆ 4:17 ಆಗಿರುವುದರಿಂದ ಆ ಸಮಯದಲ್ಲಿ ಎಲ್ಲರೂ ನಿದ್ದೆಯಲ್ಲಿದ್ದರು. ಈ ಕಾರಣದಿಂದಲೂ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಬ್ರಿಟಿಷ್ ಭೂವೈಜ್ಞಾನಿಕ ಸಮೀಕ್ಷೆಯ ಗೌರವ ಸಂಶೋಧನಾ ಸಹವರ್ತಿ ರೋಜರ್ ಮಸ್ಸನ್ ತಿಳಿಸಿದ್ದಾರೆ.

Turkey Earthquake Highlights: Catastrophic Quake Claims 2,600 Lives,  Erdogan Declares Week-Long Mourningಇನ್ನು ಇಲ್ಲಿನ ಕಟ್ಟಡಗಳು ಭೂಕಂಪನ ಪ್ರದೇಶಗಳಲ್ಲಿ ಕಟ್ಟುವಂಥ ಮನೆಗಳಾಗಿರಲಿಲ್ಲ, ಭೂಕಂಪಗಳಿಗೆ ಒಳಗಾಗುವ ಪ್ರದೇಶಕ್ಕೆ ಸಮರ್ಪಕವಾಗದ ಕಟ್ಟಡ ನಿರ್ಮಾಣವೂ ಸಾವು ನೋವಿಗೆ ಕಾರಣವಾಗಿದೆ.

Earthquake kills more than 3,000 in Turkey, Syria - Al-Monitor:  Independent, trusted coverage of the Middle Eastಭೂಕಂಪ ಸಂಭವಿಸಿದ ದೋಷದ ರೇಖೆಯು ಇತ್ತೀಚೆಗೆ ತುಲನಾತ್ಮಕವಾಗಿ ಶಾಂತವಾಗಿತ್ತು. ಇದೂ ಕೂಡ ಭೂಕಂಪಕ್ಕೆ ಕಾರಣವಾಗಿರಬಹುದು. ಟರ್ಕಿ ವಿಶ್ವದ ಅತ್ಯಂತ ಸಕ್ರಿಯ ಭೂಕಂಪ ವಲಯಗಳಲ್ಲಿ ಒಂದಾಗಿದೆ. ಈ ಹಿಂದೆ 1999ರಲ್ಲಿ ಭೂಕಂಪನ ಸಂಭವಿಸಿದ್ದು, 17,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!