ಟರ್ಕಿ-ಸಿರಿಯಾ ಭೂಕಂಪ: 12 ಸಾವಿರಕ್ಕೆ ಮುಟ್ಟಿದ ಸಾವಿನ ಸಂಖ್ಯೆ, ಮುಂದುವರಿದ ರಕ್ಷಣಾ ಕಾರ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ 7.8 ತೀವ್ರತೆಯ ರಾಕ್ಷಸ ರೂಪಿ ಭೂಕಂಪ ಬರೋಬ್ಬರಿ 12,000 ಜನರನ್ನು ಬಲಿತೆಗೆದುಕೊಂಡಿದೆ. ಲೆಕ್ಕವಿಲ್ಲದಷ್ಟು ಜನ ಶಿಥಿಲಗಳ ಕೆಳಗೆ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಟರ್ಕಿಯಲ್ಲಿ ಕನಿಷ್ಠ 8,574 ಜನರು ಸಾವನ್ನಪ್ಪಿ 50,000 ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ. ಸಿರಿಯಾದಲ್ಲಿ ಒಟ್ಟು ಸಾವಿನ ಸಂಖ್ಯೆ 3,802 ಕ್ಕೆ ತಲುಪಿದೆ. ವಾಯುವ್ಯದಲ್ಲಿ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳಲ್ಲಿ 1,540 ಸಾವುಗಳು ವರದಿಯಾಗಿವೆ.

ಸಿರಿಯಾದ ಸರ್ಕಾರಿ ನಿಯಂತ್ರಿತ ಪ್ರದೇಶಗಳಲ್ಲಿ 1,262 ಜನರು ಸಾವನ್ನಪ್ಪಿದ್ದಾರೆ ಎಂದು ಸಿರಿಯಾದ ಆರೋಗ್ಯ ಸಚಿವ ಹಸನ್ ಅಲ್-ಘೋಬಾಶ್ ಹೇಳಿದ್ದಾರೆ. ಸಿರಿಯಾದಲ್ಲಿ ಗಾಯಗೊಂಡವರ ಒಟ್ಟು ಸಂಖ್ಯೆ 5,008 ತಲುಪಿದೆ.

ಅವಶೇಷಗಳಡಿಯಲ್ಲಿ ಇನ್ನೂ ಸಾವಿರಾರು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಹವಾಮಾನ ಪರಿಸ್ಥಿತಿಗಳು ರಕ್ಷಣಾ ಪ್ರಯತ್ನಗಳಿಗೆ ಅಡ್ಡಿಯಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸಹಾಯ ಸಂಸ್ಥೆಗಳು ಮತ್ತು ತುರ್ತು ಕಾರ್ಯಕರ್ತರು ಹೇಳಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!