June 21, 2026
Sunday, June 21, 2026
spot_img

ಭಾರತದ ಸಾಲಿಸಿಟರ್ ಜನರಲ್ ಆಗಿ ತುಷಾರ್ ಮೆಹ್ತಾ ಮರುನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದ ಸಾಲಿಸಿಟರ್‌ ಜನರಲ್‌ ಆಗಿ ಹಿರಿಯ ನ್ಯಾಯವಾದಿ ತುಷಾರ್‌ ಮೆಹ್ತಾ ಅವರನ್ನು ಮರುನೇಮಕ ಮಾಡಲು ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ.

ಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ತುಷಾರ್ ಮೆಹ್ತಾ ಅವರ ಈ ಹೊಸ ಅಧಿಕಾರಾವಧಿಯು ಜುಲೈ 1 ರಿಂದ ಜಾರಿಗೆ ಬರಲಿದೆ. 2018ರ ಅಕ್ಟೋಬರ್ 10ರಂದು ಮೆಹ್ತಾ ಅವರು ಮೊದಲ ಬಾರಿಗೆ ಸಾಲಿಸಿಟರ್ ಜನರಲ್ ಆಗಿ ನೇಮಕವಾಗಿದ್ದರು. ಆ ನಂತರ ಮರುನೇಮಕವಾಗುತ್ತಲೇ ಬಂದಿದ್ದಾರೆ. ಈಗ ದೇಶದಲ್ಲಿ ಅತಿಹೆಚ್ಚು ಅವಧಿಗೆ ಸಾಲಿಸಿಟರ್ ಜನರಲ್ ಆಗಿರುವ ದಾಖಲೆ ಮಾಡಿದ್ದಾರೆ.

ತುಷಾರ್ ಮೆಹ್ತಾ ಅವರು ದೇಶದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹೊಸ ವಿಸ್ತರಣೆಯೊಂದಿಗೆ ಅವರು ದೇಶದ ಇತಿಹಾಸದಲ್ಲೇ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಕಾನೂನು ಅಧಿಕಾರಿಗಳಲ್ಲಿ ಒಬ್ಬರಾಗಲಿದ್ದಾರೆ. ಸಾಲಿಸಿಟರ್ ಜನರಲ್ ಎಂಬುದು ಎರಡನೇ ಅತ್ಯುನ್ನತ ಕಾನೂನು ಅಧಿಕಾರಿ ಸ್ಥಾನ ಆಗಿದೆ. ಅಟಾರ್ನಿ ಜನರಲ್ ಅವರು ಅಗ್ರಗಣ್ಯರಾಗಿದ್ದಾರೆ. ಅವರ ನಂತರದ ಸ್ಥಾನ ಸಾಲಿಸಿಟರ್ ಜನರಲ್ ಅವರದ್ದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !