‘ಟ್ವಿಟರ್‌ನಲ್ಲೇ ಟ್ವೀಟ್ ಮಾಡಿ, ಟ್ವಿಟರ್ ಬೈತಾರೆ ಜನ, ಐ ಲವ್ ಇಟ್!’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟ್ವಿಟರ್‌ನ ನೂತನ ಮುಖ್ಯಸ್ಥ ಎಲಾನ್ ಮಸ್ಕ್ ಹಲವು ಕ್ರಮಗಳಿಗೆ ಮುಂದಾಗಿದ್ದಾರೆ. ಇದು ಎಲ್ಲರಿಗೂ ಒಪ್ಪಿಗೆಯಿಲ್ಲ. ಟ್ವಿಟರ್‌ನಲ್ಲಿಯೇ ಎಲಾನ್ ಮಸ್ಕ್ ಹಾಗೂ ಈಗಿನ ಟ್ವಿಟರ್ ನೀತಿಗಳ ಬಗ್ಗೆ ಟ್ವೀಟ್‌ದಾರರು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಟ್ವಿಟರ್ ಬ್ಲ್ಯೂ ಟಿಕ್‌ಗೆ ಶುಲ್ಕ, ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿದ್ದು ಹೀಗೆ ಹತ್ತು ಹಲವು ಕಾರಣದಿಂದ ಎಲಾನ್ ಮಸ್ಕ್ ಬಗ್ಗೆ ಟ್ವೀಟುದಾರರು ಸಿಟ್ಟಾಗಿದ್ದಾರೆ. ಎಲಾನ್ ವಿರುದ್ಧ ತಮ್ಮ ಟ್ವೀಟ್‌ಗಳನ್ನು ಹಂಚಿಕೊಳ್ಳುತ್ತಾರೆ.

ಇದನ್ನು ಲೇವಡಿ ಮಾಡಿದ ಎಲಾನ್ ಮಸ್ಕ್, ಟ್ವಿಟರ್‌ನಲ್ಲಿಯೇ ಟ್ವೀಟ್ ಮಾಡಿ, ಟ್ವಿಟರ್ ಬಗ್ಗೆ ದೂರು ನೀಡ್ತಾರೆ, ಐ ಲವ್ ಇಟ್ ಎಂದು ಹೇಳಿದ್ದಾರೆ. ಈ ರೀತಿ ಹೇಳಿದ್ದಕ್ಕೆ ಸಿಟ್ಟಾದ ಜನ ಮತ್ತೆ ಟ್ವೀಟ್ ಮಾಡಿ ಮಸ್ಕ್ ವಿರುದ್ಧ ಮಾತನಾಡುತ್ತಿದ್ದಾರೆ.

ನಮ್ಮ ಬಗ್ಗೆ ತಮಾಷೆ ಮಾಡಿ ನಗೋದೇನಿದೆ, ಟ್ವಿಟರ್ ನಿಮ್ಮ ಕೈಗೆ ಬಂದಿದ್ದು ಈಗಲೇ ಅಲ್ವಾ?, ಸಮಾಜದ ಸಮಸ್ಯೆಗಳ ಬಗ್ಗೆ ಮಾತಾಡೋಕೆ ಸಮಾಜಲ್ಲೇ ಇರಬೇಕು, ಮೊಬೈಲ್ ಬಗ್ಗೆ ದೂರು ಕೊಡೋಕೆ ಮೊಬೈಲ್ ಬೇಕು ಇದೆಲ್ಲಾ ಬೇಸಿಕ್, ಟ್ವಿಟರ್ ಅಷ್ಟೇ ಅಲ್ಲ, ಟಿವಿ ಆನ್ ಮಾಡಿ ನೋಡಿ ಅಲ್ಲಿಯೂ ನಿಮ್ಮ ಬಗ್ಗೆ ಕಂಪ್ಲೆಂಟ್ಸ್ ಇವೆ ಎಂದು ಟ್ವೀಟುದಾರರು ತಿರುಗೇಟು ನೀಡಿದ್ದಾರೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!