Friday, December 8, 2023

Latest Posts

ಟ್ವಿಟ್ಟರ್‌, ಅಮೆಜಾನ್‌ ಆಯಿತು ಈಗ ಗೂಗಲ್‌ ಸರದಿ: 10 ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಟ್ವಿಟ್ಟರ್‌, ಅಮೆಜಾನ್‌, ಮೆಟಾ ಕಂಪೆನಿ ತಮ್ಮಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿದ್ದು, ಇದೀಗ ಈ ಸಾಲಿಗೆ ಗೂಗಲ್‌ ಮಾತೃಸಂಸ್ಥೆ ಅಲ್ಫಾಬೆಟ್‌ ಸೇರಿಕೊಂಡಿದೆ.

ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ ಆವರಿಸುತ್ತಿದ್ದಂತೆ ಕಂಪನಿಗಳು ಉದ್ಯೋಗಿಗಳನ್ನು ಖರ್ಚು ಕಡಿಮೆ ಮಾಡಲು ಉದ್ಯೋಗಿಗಳನ್ನುಕೆಲಸದಿಂದ ವಜಾಮಾಡುತ್ತಿದ್ದು, ಅಲ್ಫಾಬೆಟ್‌ ಸುಮಾರು 10 ಸಾವಿರ ಉದ್ಯೋಗಿಗಳನ್ನು ಅಥವಾ ಅದರ ಶೇ. 6ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಅದಕ್ಕಾಗಿ ಗೂಗಲ್ ಶ್ರೇಯಾಂಕ ಪದ್ಧತಿ ಅನುಸರಿಸಲಿದ್ದು, ಯಾರಿಗೆ ಕಡಿಮೆ ರೇಟಿಂಗ್‌ ಸಿಗುತ್ತದೋ ಅವರನ್ನು ಕೆಲಸದಿಂದ ತೆಗೆದು ಹಾಕಲು ಕಂಪನಿ ಪ್ಲ್ಯಾನ್‌ ಮಾಡಿದೆ.

ಅಲ್ಫಾಬೆಟ್‌ ಕಂಪನಿಯಲ್ಲಿ 1.87 ಲಕ್ಷ ಉದ್ಯೋಗಿಗಳಿದ್ದಾರೆ. ಮೂರನೇ ತ್ರೈಮಾಸಿಕದಲ್ಲಿ ಅಲ್ಫಾಬೆಟ್‌ 13.9 ಶತಕೋಟಿ ಡಾಲರ್‌ ನಿವ್ವಳ ಲಾಭಗಳಿಸಿದೆ. ಆದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.27ರಷ್ಟು ಕುಸಿತವಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!